May 25, 2026
Monday, May 25, 2026
spot_img

ಜಸ್ಟ್ ಒಂದು ಕಾಲ್.. ತುರ್ತು ಸೇವೆ ನಿಮ್ಮ ಮನೆ ಬಾಗಿಲಿಗೆ: ರಾಜ್ಯ ಸರ್ಕಾರದ ಸುಪರ್ದಿಗೆ ‘108 ಆಂಬುಲೆನ್ಸ್’ ಸೇವೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಲ್ಲಿ 108 ಆರೋಗ್ಯ ಕವಚ ಆಂಬುಲೆನ್ಸ್ ಸೇವೆಯ ಹೊಸ ಕಮಾಂಡ್ ಕಂಟ್ರೋಲ್ ಸೆಂಟರ್ ಉದ್ಘಾಟನೆಗೊಂಡಿದ್ದು, ಇನ್ನುಮುಂದೆ ಈ ಸೇವೆ ಸಂಪೂರ್ಣವಾಗಿ ರಾಜ್ಯ ಸರ್ಕಾರದ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸಲಿದೆ. ದೇಶದಲ್ಲೇ ಮೊದಲ ಬಾರಿಗೆ ಸರ್ಕಾರವೇ ಈ ತುರ್ತು ಆರೋಗ್ಯ ಸೇವೆಯನ್ನು ನೇರವಾಗಿ ನಿರ್ವಹಿಸಲು ಮುಂದಾಗಿದೆ.

ಸುಧಾರಿತ ತಂತ್ರಜ್ಞಾನ ಅಳವಡಿಕೆ

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ಯೋಜನೆಗೆ ಹೊಸ ರೂಪ ನೀಡಲಾಗಿದೆ ಎಂದು ಹೇಳಿದರು. ಈ ವ್ಯವಸ್ಥೆಯಲ್ಲಿ ಆಂಬುಲೆನ್ಸ್ ಟ್ರ್ಯಾಕಿಂಗ್, ವೈದ್ಯರೊಂದಿಗೆ ನೇರ ಸಂಪರ್ಕ, ರೋಗಿಯ ಸ್ಥಿತಿಗೆ ಅನುಗುಣವಾಗಿ ಸೂಕ್ತ ಆಸ್ಪತ್ರೆಗೆ ಮಾಹಿತಿ ರವಾನೆ ಮಾಡುವ ವ್ಯವಸ್ಥೆ ಸೇರಿಸಲಾಗಿದೆ.

ಇದನ್ನೂ ಓದಿ:

ಚಾಮರಾಜನಗರದಲ್ಲಿ ಯಶಸ್ವಿ ಪ್ರಯೋಗ

ಹೊಸ ಮಾದರಿಯನ್ನು ಮೊದಲಿಗೆ ಚಾಮರಾಜನಗರ ಜಿಲ್ಲೆಯಲ್ಲಿ ಪರೀಕ್ಷಿಸಲಾಗಿದ್ದು, ಯಶಸ್ಸಿನ ಬಳಿಕ ರಾಜ್ಯಾದ್ಯಂತ ಜಾರಿಗೊಳಿಸಲಾಗುತ್ತಿದೆ. ಸರ್ಕಾರಿ ಸ್ವಾಮ್ಯದ ಸಿ-ಡಾಕ್ ಸಂಸ್ಥೆ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದ್ದು, 24/7 ಕಮಾಂಡ್ ಸೆಂಟರ್ ಕಾರ್ಯನಿರ್ವಹಿಸಲಿದೆ.

ಸಾರ್ವಜನಿಕ ಆರೋಗ್ಯಕ್ಕೆ ಹೊಸ ಹೆಜ್ಜೆ

ರಾಜ್ಯದ ಎಲ್ಲಾ ಆಂಬುಲೆನ್ಸ್‌ಗಳನ್ನು ಏಕೀಕೃತ ವ್ಯವಸ್ಥೆಗೆ ಜೋಡಿಸಲಾಗುತ್ತಿದೆ. ಟೆಲಿ ಮನಸ್, ಇ-ಸಂಜೀವಿನಿ ಹಾಗೂ ಮಹಿಳಾ-ಮಕ್ಕಳ ಸಹಾಯವಾಣಿ ಸೇವೆಗಳನ್ನೂ ಇದರೊಂದಿಗೆ ಸಂಪರ್ಕಿಸಲಾಗಿದೆ. ತುರ್ತು ಚಿಕಿತ್ಸೆಯನ್ನು ಇನ್ನಷ್ಟು ವೇಗವಾಗಿ ಜನರಿಗೆ ತಲುಪಿಸುವುದು ಸರ್ಕಾರದ ಉದ್ದೇಶವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !