July 18, 2026
Saturday, July 18, 2026
spot_img

ಲಾಹೋರ್‌ನಲ್ಲಿ ‘ಹಿಂದೂ ಹೆಸರು’ ಹೈಡ್ರಾಮಾ: ಕೊನೆ ಕ್ಷಣದಲ್ಲಿ ಪಾಕ್ ಸರ್ಕಾರದ ಯೂ-ಟರ್ನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದಲ್ಲಿ ಲಾಹೋರ್ ಸೇರಿದಂತೆ ಕೆಲವು ಪ್ರದೇಶಗಳಿಗೆ ವಿಭಜನೆಗೂ ಮುಂಚಿನ ಹಳೆಯ ಹಿಂದೂ ಮತ್ತು ಸಿಖ್ ಮೂಲದ ಹೆಸರುಗಳನ್ನು ಮರುಸ್ಥಾಪಿಸುವ ಯೋಜನೆ ಇದೀಗ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಸರ್ಕಾರದ ಈ ನಿರ್ಧಾರ ರಾಜಕೀಯ ಹಾಗೂ ಧಾರ್ಮಿಕ ವಲಯಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಲಾಹೋರ್ ಪರಂಪರೆ ಉಳಿಸುವ ಯೋಜನೆ

ಪಂಜಾಬ್ ಸರ್ಕಾರವು ಲಾಹೋರ್ ನಗರದ ಐತಿಹಾಸಿಕ ಪರಂಪರೆಯನ್ನು ಮರುಜೀವಂತಗೊಳಿಸುವ ಉದ್ದೇಶದಿಂದ ಹಳೆಯ ರಸ್ತೆ ಹಾಗೂ ಬೀದಿಗಳ ಹೆಸರನ್ನು ಪುನಃ ಬಳಸಲು ಮುಂದಾಗಿತ್ತು. ಈ ಯೋಜನೆಗೆ ಮಾಜಿ ಪ್ರಧಾನಿ ನವಾಜ್ ಶರೀಫ್ ಹಾಗೂ ಮುಖ್ಯಮಂತ್ರಿ ಮರ್ಯಂ ನವಾಜ್ ನೇತೃತ್ವದ ಸಮಿತಿ ಅನುಮೋದನೆ ನೀಡಿತ್ತು.

ಇದನ್ನೂ ಓದಿ:

ಮೂಲಭೂತವಾದಿಗಳ ವಿರೋಧ ಜೋರಾಯ್ತು

ಆದರೆ ಯೋಜನೆ ಬಹಿರಂಗವಾದ ಬೆನ್ನಲ್ಲೇ ಕೆಲ ಧಾರ್ಮಿಕ ಸಂಘಟನೆಗಳು ಮತ್ತು ಕಠೋರಪಂಥೀಯ ಗುಂಪುಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. “ಹಿಂದೂ ಮತ್ತು ಸಿಖ್ ಹೆಸರನ್ನು ಮರುತರುತ್ತಿದ್ದಾರೆ” ಎಂಬ ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಸರ್ಕಾರದ ಹಿಂಜರಿತ ಏಕೆ?

ವಿವಾದ ತೀವ್ರವಾಗುತ್ತಿದ್ದಂತೆ ಪಾಕ್ ಆಡಳಿತ ಇದೀಗ “ಯಾವುದೇ ಅಂತಿಮ ನಿರ್ಧಾರವಾಗಿಲ್ಲ” ಎಂದು ಹೇಳಿದೆ. ಧಾರ್ಮಿಕ ಬಣ್ಣ ಪಡೆದುಕೊಂಡ ಈ ವಿವಾದ ಮತ್ತಷ್ಟು ಉಲ್ಬಣಿಸದಂತೆ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ ಎನ್ನಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !