September 27, 2026
Sunday, September 27, 2026
spot_img

ಭಕ್ತಿಯಾತ್ರೆಯ ಮಧ್ಯೆ ಭೀಕರ ದುರಂತ: ಟಾಟಾ ಏಸ್ ಉರುಳಿ ಮಹಿಳೆ ಬಲಿ, 19 ಮಂದಿಗೆ ಗಾಯ

ಹೊಸದಿಗಂತ ವರದಿ ಮಂಡ್ಯ :

ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್‌ ಆಟೋ (ಟಾಟಾ ಏಸ್) ರಸ್ತೆ ಬದಿಗೆ ಉರುಳಿಬಿದ್ದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿ 19 ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಕೋಡಿಕೊಪ್ಪಲು ಗ್ರಾಮದ ಬಳಿ ನಡೆದಿದೆ.

ತಾಲೂಕಿನ ಬಿ. ಹಟ್ನ ಗ್ರಾಮದ ತಾಯಮ್ಮ (55) ಎಂಬುವರೇ ಮೃತಪಟ್ಟ ಮಹಿಳೆಯಾಗಿದ್ದಾರೆ. ನಾಗೇಶ (45), ಜೀವಿತಾ (8), ಮಾನಸ (13), ಮಂಜುಳಾ (35), ಪ್ರಭಾ (43), ದಿಶಾಂತ್ (15), ಜೀವನ್ (14), ಶಿಲ್ಪ (11), ನಿರಂಜನ್ (10), ಲಕ್ಷ್ಮೀಕಾಂತ್ (15), ಪ್ರಮೋದ್ (15), ಸಾಕಮ್ಮ (76) ಸೇರಿದಂತೆ 19 ಮಂದಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ:

ತಾಲೂಕಿನ ಬಿ. ಹಟ್ನ ಗ್ರಾಮದಿಂದ ನಾಗಮಂಗಲ ತಾಲೂಕು ಚಿಕ್ಕಯಗಟಿ ಗ್ರಾಮದಲ್ಲಿರುವ ಚಿಕ್ಕಯಗಟಿ ಮಾರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಹರಿಸೇವೆ ಕಾರ್ಯಕ್ರಮಕ್ಕಾಗಿ ಗೂಡ್ಸ್‌ ಆಟೋ (ಟಾಟಾ ಏಸ್)ನಲ್ಲಿ ತೆರಳಿದ್ದರು.

ಪೂಜೆ ಮುಗಿಸಿಕೊಂಡು ವಾಪಸ್ಸು ಬರುವಾಗ ಬಸರಾಳು ಬಳಿಯ ಕೋಡಿಕೊಪ್ಪಲು ಸಮೀಪ ಚಾಲಕ ನಿಯಂತ್ರಣ ತಪ್ಪಿದ ಗೂಡ್ಸ್‌ ಆಟೋ ರಸ್ತೆ ಬದಿಗೆ ಉರುಳಿಬಿದ್ದ ಪರಿಣಾಮ ಈ ದುರ್ಘಟನೆ ನಡೆದಿದೆ.

Must Read