May 27, 2026
Wednesday, May 27, 2026
spot_img

ದಿನಭವಿಷ್ಯ: ಎಲ್ಲರಿಂದ ಮೆಚ್ಚುಗೆ ಪಡೆಯುವ ದಿನ,ನಿಮ್ಮ ಕ್ಷೇತ್ರದಲ್ಲಿ ನೀವೇ ಸ್ಟಾರ್‌

ಮೇಷ
ನೆಗೆಟಿವ್ ಚಿಂತನೆ ಜನರನ್ನು ದೂರವಿಡಿ. ಅವರ ಪ್ರಭಾವಕ್ಕೆ ಸಿಲುಕಬೇಡಿ. ನಿಜವಾಗಿ ಉತ್ತಮ ಫಲವನ್ನು ಗ್ರಹಗತಿ ಸೂಚಿಸುತ್ತಿದೆ.  
ವೃಷಭ
ಎಲ್ಲವೂ ನಿಮಗೆ ಪೂರಕವಾಗಿಲ್ಲವೆ? ನಿಮ್ಮ ಕಾರ್ಯಶೈಲಿಯಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳಿ. ಗಣೇಶನನ್ನು ಪ್ರಾರ್ಥಿಸಿ.  ನಿಮಗೆ ಒಳಿತಾಗಲಿದೆ.                      
ಮಿಥುನ
ಸಂಬಂಧದಲ್ಲಿ ದೊಡ್ಡ ತಿರುವು ಉಂಟಾದೀತು. ವಿವಾಹ ಸಂಬಂಧ ಒದಗಬಹುದು. ವದಂತಿಗೆ ಕಿವಿಗೊಡಬೇಡಿ. ಆರ್ಥಿಕ ಪರಿಸ್ಥಿತಿ ಸುಧಾರಣೆ.          
ಕಟಕ
ಇಂದು ಗಂಭೀರ ಮನಸ್ಥಿತಿ ತೋರುವಿರಿ. ಲಘು ಧೋರಣೆ ತೊರೆಯುವಿರಿ. ಇದು ನಿಮಗೆ ಒಳಿತನ್ನೇ ತರಲಿದೆ. ಆರ್ಥಿಕ ದೃಢತೆ.                          
ಸಿಂಹ
ಕೆಲಸದಲ್ಲಿ ಬದ್ಧತೆ ಇರಲಿ. ಕಾಟಾಚಾರದ ಕೆಲಸ ಮಾಡಬೇಡಿ. ಹಿರಿಯರ ಕಿವಿಮಾತು ಗಂಭೀರವಾಗಿ ಪರಿಗಣಿಸಿ. ಸಂಬಂಧದಲ್ಲಿ ಒಡಕು.              
ಕನ್ಯಾ
ಎಲ್ಲರಿಂದ ಮೆಚ್ಚುಗೆ ಪಡೆಯುವ ದಿನ. ನಿಮ್ಮ ಕ್ಷೇತ್ರದಲ್ಲಿ  ಸಾಧನೆಯ ಗರಿ. ಹಣದ ವಿಚಾರದಲ್ಲಿ ರಿಸ್ಕ್ ಬೇಡ. ಎಚ್ಚರಿಕೆಯ ಹೆಜ್ಜೆ ಇಡುವುದೊಳಿತು.                  
ತುಲಾ
 ಆತ್ಮೀಯರ ಬೆಂಬಲದಿಂದ ನಿಮ್ಮ ಕಾರ್ಯ ಸುಗಮ.  ಕಾಡುವ ಒತ್ತಡಕ್ಕೆ ಶೀಘ್ರ ಪರಿಹಾರ ಸಿಗಲಿದೆ.  ಆರ್ಥಿಕ ಹಿನ್ನಡೆ ಸಂಭವ.                            
ವೃಶ್ಚಿಕ
ಇಂದು ಆರಂಭಿಸುವ ಕೆಲಸದಲ್ಲಿ ಸಫಲತೆ ಖಚಿತ. ಎಲ್ಲರ ಜತೆ ಸೌಹಾರ್ದ ಸಂಬಂಧ ಕಾಯ್ದುಕೊಳ್ಳಿ. ಕ್ಷುಲ್ಲಕ ವಿಷಯ ಬಂಧುತ್ವ ಕೆಡಿಸದಿರಲಿ.
ಧನು
 ಪ್ರೀತಿಯಲ್ಲಿ ಅಪಯಶಸ್ಸು. ಹಳೆಯ ಅನುಭವ ಕಹಿಯಾಗಿ ಕಾಡಲಿದೆ. ಮಾನಸಿಕ ಉದ್ವಿಗ್ನತೆ. ಬಂಧುಗಳ ಅಸಹಕಾರ.
ಮಕರ
ವೈರುಧ್ಯಮಯ ಭಾವನೆಗಳ ತಾಕಲಾಟ. ಹೊಣೆಗಾರಿಕೆ ಹೆಚ್ಚಳ. ಸಹಕಾರ ಕಡಿಮೆ. ತಾಳ್ಮೆಯಿಂದ ಕಾಯಿರಿ. ಒಳ್ಳೆದಿನ ಬರಲಿದೆ.        
ಕುಂಭ
 ಕಳೆದ ಕೆಲದಿನಗಳ ಗೊಂದಲ ಇಂದು ಇತ್ಯರ್ಥ. ನಿಶ್ಚಿತ ನಿರ್ಧಾರಕ್ಕೆ ಬರುವಿರಿ. ಸಂಕಷ್ಟಗಳು ಪರಿಹಾರ. ಸಂಬಂಧ ಸುಧಾರಣೆ.            
 ಮೀನ
 ಅನಿರೀಕ್ಷಿತ ಕಾರ್ಯದೊತ್ತಡ. ಆದರೂ ಸರಿಯಾಗಿ ನಿಭಾಯಿಸುವಿರಿ. ಆರ್ಥಿಕ ಲಾಭ. ಚರ್ಮದ ಅಲರ್ಜಿ ಕಾಡಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !