May 28, 2026
Thursday, May 28, 2026
spot_img

FOOD | ಕಡಿಮೆ ಎಣ್ಣೆಯಲ್ಲಿ ಮಾಡಿ ಸೂಪರ್ ಹೆಲ್ದಿ ಹೆಸರುಬೇಳೆ-ಸೊಪ್ಪಿನ ಪಲ್ಯ

ಹೆಸರುಬೇಳೆ ಮತ್ತು ಹಸಿರು ಸೊಪ್ಪಿನ ಪಲ್ಯವು ಉತ್ತರ ಕರ್ನಾಟಕ ಮತ್ತು ಹಳೇ ಮೈಸೂರು ಭಾಗದ ಮನೆಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ಒಂದು ಸಾಂಪ್ರದಾಯಿಕ ಹಾಗೂ ಪೌಷ್ಟಿಕಯುಕ್ತ ಸೈಡ್ ಡಿಶ್ ಆಗಿದೆ. ತೂಕ ಇಳಿಸಲು ಬಯಸುವವರಿಗೆ, ಮಧುಮೇಹಿಗಳಿಗೆ ಮತ್ತು ಜಿಮ್‌ಗೆ ಹೋಗುವವರಿಗೆ ಇದು ಒಂದು ಅತ್ಯುತ್ತಮವಾದ ಡಯಟ್ ರೆಸಿಪಿ.

ಬೇಕಾಗುವ ಸಾಮಗ್ರಿಗಳು:
ಹಸಿರು ಸೊಪ್ಪು (ಸಬ್ಬಸಿಗೆ, ಪಾಲಕ್ ಅಥವಾ ದಂಟಿನ ಸೊಪ್ಪು)
ಹೆಸರುಬೇಳೆ
ಈರುಳ್ಳಿ
ಹಸಿಮೆಣಸಿನಕಾಯಿ)
ಎಣ್ಣೆ
ಸಾಸಿವೆ
ಜೀರಿಗೆ
ಕರಿಬೇವು
ಉಪ್ಪು
ಅರಿಶಿನ
ಕಾಯಿತುರಿ
ಕೊತ್ತಂಬರಿ ಸೊಪ್ಪು

ತಯಾರಿಕೆ ವಿಧಾನ
ಮೊದಲು ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು, ಅರ್ಧ ಗಂಟೆ ನೀರಿನಲ್ಲಿ ನೆನೆಸಿಡಿ. ಇದರಿಂದ ಬೇಳೆ ಬೇಗ ಬೇಯುತ್ತದೆ. ನಂತರ ಒಂದು ಬಾಣಲೆಯಲ್ಲಿ 1 ಚಮಚ ಎಣ್ಣೆ ಕಾಯಿಸಿ ಸಾಸಿವೆ, ಜೀರಿಗೆ ಮತ್ತು ಕರಿಬೇವು ಹಾಕಿ ಸಿಡಿಸಿ. ನಂತರ ಹಸಿಮೆಣಸಿನಕಾಯಿ ಮತ್ತು ಹೆಚ್ಚಿದ ಈರುಳ್ಳಿ ಸೇರಿಸಿ 2 ನಿಮಿಷ ಚೆನ್ನಾಗಿ ಬಾಡಿಸಿ. ಹೆಚ್ಚಿದ ಹಸಿರು ಸೊಪ್ಪು, ನೆನೆಸಿದ ಹೆಸರುಬೇಳೆ ಮತ್ತು ಅರಿಶಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸೊಪ್ಪಿನಲ್ಲಿ ನೀರಿನಂಶ ಇರುವುದರಿಂದ ಹೆಚ್ಚುವರಿ ನೀರು ಬೇಕಾಗುವುದಿಲ್ಲ. ಆದರೂ ಬೇಳೆ ಬೇಯಲು 2-3 ಚಮಚ ನೀರನ್ನು ಮೇಲೆ ಚಿಮುಕಿಸಿ, ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 5 ರಿಂದ 7 ನಿಮಿಷ ಬೇಯಿಸಬೇಕು. ಬೇಳೆ ಮೃದುವಾದ ನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕೈಯಾಡಿಸಿ. ಕೊನೆಯಲ್ಲಿ ಕಾಯಿತುರಿ ಮತ್ತು ಕೊತ್ತಂಬರಿ ಸೊಪ್ಪು ಉದುರಿಸಿ ಮಿಕ್ಸ್ ಮಾಡಿ ಒಲೆಯಿಂದ ಇಳಿಸಿ. ಈಗ ಆರೋಗ್ಯಕರ ಪಲ್ಯ ಸಿದ್ಧವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !