May 28, 2026
Thursday, May 28, 2026
spot_img

ಕಾಂಗ್ರೆಸ್ ಸರ್ಕಾರಕ್ಕೆ ಇನ್ನು ಉಳಿಗಾಲವಿಲ್ಲ: ಸಿದ್ದರಾಮಯ್ಯ ರಾಜೀನಾಮೆಗೆ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ರಿಯಾಕ್ಷನ್

ಹೊಸ ದಿಗಂತ ವರದಿ,ಬೆಳಗಾವಿ:

ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೇಲೆ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.

ಗೋಕಾಕ್ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಮೂರು ವರ್ಷಗಳ ಕಾಲ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಯಾವುದೇ ರೀತಿ ಸಮಸ್ಯೆಯಾಗದ ಹಾಗೇ ನಿಗಿಸಿಕೊಂಡ ಬಂದಿದ್ದಾರೆ. ಇಂತಹ ಮಹಾ ನಾಯಕನಿಗೆ ಅನ್ಯಾಯ ಮಾಡಿದರೆ ಕಾಂಗ್ರೆಸ್ ಸರ್ಕಾರ ಪಲ್ಟಿ ಹೊಡಿಯುವದರಲ್ಲ ಸಂಶಯವಿಲ್ಲ ಎಂದರು.

ಗ್ಯಾರಂಟಿ ಯೋಜನೆಗಳು ನಿಲ್ಲುವುದು ನಿಚ್ಚಿತ

ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ನೀಡದ ಮೇಲೆ, ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗ್ಯಾರಂಟಿಗಳು ಅತಿ ಶೀಘ್ರವೇ ನಿಲ್ಲಲಿವೆ. ಅಲ್ಲದೇ ಸರ್ಕಾರಿ ನೌಕರರಿಗೆ ನೀಡುವೆ ವೇತನಗಳಲ್ಲೂ ಸಮಸ್ಯೆಗಳು ಉಂಟಾಗಲಿವೆ ಎಂದು ಭವಿಷ್ಯವನ್ನು ನುಡಿದರು.

ಕುರುಬ ಸಮಾಜಕ್ಕೆ ಅನ್ಯಾಯ ಮಾಡಿದ ಕೈ

ಹಿಂದೆ ವೀರೇಂದ್ರ ಪಾಟೀಲ ಅವರು ಸಿಎಂ ಆಗಿದ್ದಾಗ ಕಾಂಗ್ರೆಸ್ ಹೈಕಮಾಂಡ್ ರಾಜೀನಾಮೆ ನೀಡುವಂತೆ ಮಾಡಿ ಲಿಂಗಾಯತ ಸಮುದಾಯದವರಿಗೆ ಅನ್ಯಾಯ ಮಾಡಿತ್ತು, ಅದರಂತೆ ಈಗ ಕುರುಬ ಸಮುದಾಯದ ದೊಡ್ಡ ನಾಯಕ ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ನೀಡುವಂತೆ ಹೇಳಿ ಇಡಿ ಕುರುಬ ಸಮುದಾಯಕ್ಕೆ ಕಾಂಗ್ರೆಸ್ ಹೈ ಕಮಾಂಡ್ ಅನ್ಯಾಯ ಮಾಡಿದೆ. 2028ಕ್ಕೆ ಕಾಂಗ್ರೆಸ್ ಪಕ್ಷ 40ರ ಸಂಖ್ಯೆಗೆ ಬಂದು ತಲುಪಿದರೆ ಆಚ್ಚರ್ಯ ಪಡುವ ಸಂಗತಿ ಏನು ಇಲ್ಲ ಎಂದರು.

ಕನ್ನಡ ಬಾರದ ಕಾಂಗ್ರೆಸ್ ಹೈಕಮಾಂಡ್

ಕಾಂಗ್ರೆಸ್ ಹೈ ಕಮಾಂಡ್ ಮಟ್ಟದಲ್ಲಿರುವ ಕಾಂಗ್ರೆಸ್ನ ಪ್ರಭಾವಿ ನಾಯಕ ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಕನ್ನಡ ಮಾತನಾಡಲು ಬರುವುದಿಲ್ಲ. ಇವರಿಗೆ ಬೆಂಗಳೂರು ಬಿಟ್ಟರೆ ರಾಜ್ಯದಲ್ಲಿರುವ ಯಾವ ಊರುಗಳು ಇವರಿಗೆ ಗೊತ್ತಿಲ್ಲ. ಇಂತವರು ಹೈಕಮಾಂಡ್ ಮಟ್ಟದಲ್ಲಿ ಕುಳಿತು ಸಿದ್ದರಾಮಯ್ಯನವರಿಗೆ ದಾರಿ ಹೇಳುವಂತರಾಗಿದ್ದಾರೆ ಎಂದು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ವ್ಯಂಗ್ಯವಾಡಿದರು.

ಜೇನುಗೂಡಿಗೆ ಕೈ ಹಾಕಿದ ಹೈಕಮಾಂಡ್

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಎಲ್ಲ ರೀತಿಯಿಂದಲೂ ಸುಸುತ್ರವಾಗಿ ಸರ್ಕಾರ ನಿಗಿಸಿಕೊಂಡು ಹೊಗುತ್ತಿತ್ತು. ಅದಲ್ಲೂ ಎಲ್ಲ ನಾಯಕರಿಗೂ ಕೂಡಾ ಒಂದಲ್ಲಾ ಒಂದು ಹುದ್ದೆಯಲಿದ್ದು, ಸರ್ಕಾರ ಸುಭದ್ರವಾಗಿತ್ತು. ಆದರೆ ಈಗ ಕಾಂಗ್ರೆಸ್ ಹೈಕಮಾಂಡ್ ಸಿಎಂ ಬದಲಾವಣೆ ಮಾಡುವ ನಿರ್ಧಾರ ಮಾಡಿ ಜೇನು ಗೂಡಿಗೆ ಕೈ ಹಾಕುವಂತೆ ಮಾಡಿದೆ ಎಂದರು. ಇನ್ನು 2028ಕ್ಕೆ ಜ್ವಾಲಾಮುಕಿಯಾಗಿ ಸ್ಪೋಟಗೊಳ್ಳುವದರಲ್ಲ ಸಂಶಯವಿಲ್ಲ ಎಂದು ತಮ್ಮ ವಿಶ್ವಾಸ ಹೊರಹಾಕಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !