ಮನೆಯಲ್ಲೇ ಕೇವಲ 5 ರಿಂದ 10 ನಿಮಿಷಗಳಲ್ಲಿ ಮಾಡಬಹುದಾದ ಹೋಟೆಲ್ ಶೈಲಿಯ ರುಚಿಕರವಾದ ಮತ್ತು ಚಟಪಟ ಮಸಾಲೆಯುಕ್ತ ಸ್ವೀಟ್ ಕಾರ್ನ್ ಚಾಟ್ ಮಸಾಲಾ ರೆಸಿಪಿ ಇಲ್ಲಿದೆ. ಇದು ಸಂಜೆಯ ಸಮಯಕ್ಕೆ ಅತ್ಯುತ್ತಮವಾದ ಆರೋಗ್ಯಕರ ತಿಂಡಿಯಾಗಿದೆ.
ಬೇಕಾಗುವ ಸಾಮಗ್ರಿಗಳು:
ಸ್ವೀಟ್ ಕಾರ್ನ್
ಈರುಳ್ಳಿ
ಟೊಮೆಟೊ
ಹಸಿ ಮೆಣಸಿನಕಾಯಿ
ಕೊತ್ತಂಬರಿ ಸೊಪ್ಪು
ಬೆಣ್ಣೆ ಅಥವಾ ಎಣ್ಣೆ
ಚಾಟ್ ಮಸಾಲಾ ಪುಡಿ
ಅಚ್ಚ ಖಾರದ ಪುಡಿ
ಜೀರಿಗೆ ಪುಡಿ
ಕಾಳು ಮೆಣಸಿನ ಪುಡಿ
ಲಿಂಬೆಹಣ್ಣಿನ ರಸ
ಉಪ್ಪು
ಮಾಡುವ ವಿಧಾನ:
ಮೊದಲು ಸ್ವೀಟ್ ಕಾರ್ನ್ ಕಾಳುಗಳನ್ನು ಸ್ವಲ್ಪ ಉಪ್ಪು ಹಾಕಿದ ನೀರಿನಲ್ಲಿ5 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿಕೊಳ್ಳಬೇಕು. ನಂತರ ನೀರನ್ನು ಸಂಪೂರ್ಣವಾಗಿ ಸೋಸಿ ಬದಿಗಿಟ್ಟುಕೊಳ್ಳಬೇಕು. ಬಳಿಕ ಬಾಣಲೆಯಲ್ಲಿ 1ಚಮಚ ಬೆಣ್ಣೆ ಹಾಕಿ ಬಿಸಿ ಮಾಡಿ. ಬೆಣ್ಣೆ ಕರಗಿದ ನಂತರ ಬೇಯಿಸಿದ ಸ್ವೀಟ್ ಕಾರ್ನ್ ಹಾಕಿ ಸಣ್ಣ ಉರಿಯಲ್ಲಿ 2 ನಿಮಿಷಗಳ ಕಾಲ ಲಘುವಾಗಿ ಹುರಿದುಕೊಂಡು. ಆ ಬಿಸಿ ಕಾರ್ನ್ ಅನ್ನು ಒಂದು ದೊಡ್ಡ ಮಿಕ್ಸಿಂಗ್ ಬೌಲ್‌ಗೆ ಹಾಕಿಕೊಂಡು. ಆ ಪಾತ್ರೆಗೆ ಹೆಚ್ಚಿದ ಈರುಳ್ಳಿ, ಟೊಮೆಟೊ, ಹಸಿರು ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಅಚ್ಚ ಖಾರದ ಪುಡಿ, ಚಾಟ್ ಮಸಾಲಾ, ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಯಲ್ಲಿ 1 ಚಮಚ ಲಿಂಬೆಹಣ್ಣಿನ ರಸವನ್ನು ಹಿಂಡಿ ಮತ್ತೊಮ್ಮೆ ಕೈಯಾಡಿಸಿದರೆ ಬಿಸಿಬಿಸಿಯಾದ ಮತ್ತು ಮಸಾಲೆಯುಕ್ತ ಸ್ವೀಟ್ ಕಾರ್ನ್ ಚಾಟ್ ಸವಿಯಲು ಸಿದ್ಧವಾಗುತ್ತದೆ.



