ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ ಮಹಾ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ ಸತತ ಎರಡನೇ ಬಾರಿಗೆ ಟ್ರೋಫಿ ಗೆಲ್ಲಲು ಸಜ್ಜಾಗಿದೆ. ಕ್ವಾಲಿಫೈಯರ್-1 ರಲ್ಲಿ ಭರ್ಜರಿ ಗೆಲುವು ದಾಖಲಿಸಿ ನೇರವಾಗಿ ಫೈನಲ್ ತಲುಪಿರುವ ಆರ್‌ಸಿಬಿ, ಮೇ 31ರ ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಹೋರಾಡಲಿದೆ.
ಅಹಮದಾಬಾದ್ ಪಿಚ್ ರಿಪೋರ್ಟ್
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಪಿಚ್ ಸಾಮಾನ್ಯವಾಗಿ ಬ್ಯಾಟರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತದೆ . ಇಲ್ಲಿ ಚೆಂಡು ಸುಲಭವಾಗಿ ಬ್ಯಾಟ್‌ಗೆ ಬರುವುದರಿಂದ ಮುಕ್ತವಾಗಿ ರನ್ ಗಳಿಸಬಹುದು. ಪಂದ್ಯ ಮುಂದುವರಿದಂತೆ ಕ್ರೀಡಾಂಗಣದ ಕಪ್ಪು ಮತ್ತು ಕೆಂಪು ಮಣ್ಣಿನ ಪಿಚ್‌ಗಳ ಸ್ವರೂಪಕ್ಕೆ ತಕ್ಕಂತೆ ಸ್ಪಿನ್ನರ್ಗಳು ಸ್ವಲ್ಪ ತಿರುವ ಪಡೆಯಬಹುದು. ಮೇ ತಿಂಗಳ ತಾಪಮಾನ ಹಾಗೂ ಸಂಜೆಯ ದೃಶ್ಯಾವಳಿಗಳನ್ನು ಗಮನಿಸಿದರೆ, ಇಲ್ಲಿ ಟಾಸ್ ಗೆದ್ದ ತಂಡವು ಮೊದಲು ಬೌಲಿಂಗ್ ಆಯ್ದುಕೊಂಡು ರನ್ ಚೇಸ್ ಮಾಡಲು ಇಷ್ಟಪಡುತ್ತದೆ.
ಆರ್‌ಸಿಬಿ ಮುಂದಿರುವ ಆ 2 ಪ್ರಮುಖ ಆಯ್ಕೆಗಳು
ಫಿಲ್ ಸಾಲ್ಟ್ ವಾಪಸಾತಿ ಮತ್ತು ಆರಂಭಿಕ ಜೋಡಿಯ ಬದಲಾವಣೆ
ಟೂರ್ನಿಯ ಆರಂಭಿಕ ಹಂತದಲ್ಲಿ ಅಬ್ಬರಿಸಿದ್ದ ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟರ್ ಫಿಲ್ ಸಾಲ್ಟ್, ಕ್ವಾಲಿಫೈಯರ್ ಪಂದ್ಯದಲ್ಲಿ ಆಡಿರಲಿಲ್ಲ. ಇದೀಗ ಫೈನಲ್ ಪಂದ್ಯಕ್ಕೆ ಅವರು ಸಂಪೂರ್ಣ ಲಭ್ಯವಿದ್ದು, ಅವರನ್ನು ಪ್ಲೇಯಿಂಗ್ ಇಲೆವೆನ್ ಗೆ ಮರಳಿ ತರುವುದು ಆರ್‌ಸಿಬಿ ಮುಂದಿರುವ ಮೊದಲ ಆಯ್ಕೆಯಾಗಿದೆ.
ವೆಂಕಟೇಶ್ ಅಯ್ಯರ್ ವರ್ಸಸ್ ದೇವದತ್ ಪಡಿಕ್ಕಲ್
ಮಧ್ಯಮ ಕ್ರಮಾಂಕದಲ್ಲಿ ಭಾರತೀಯ ಬ್ಯಾಟರ್‌ಗಳ ಆಯ್ಕೆಗೆ ಸಂಬಂಧಿಸಿದ್ದಾಗಿದೆ. ದೇವದತ್ ಪಡಿಕ್ಕಲ್ ನಿರಂತರವಾಗಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮತ್ತೊಂದೆಡೆ ವೆಂಕಟೇಶ್ ಅಯ್ಯರ್ ಬಿರುಸಿನ ಬ್ಯಾಟಿಂಗ್ ಹಾಗೂ ಜೊತೆಗೆ ಮೀಡಿಯಂ ಪೇಸ್ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಅಹಮದಾಬಾದ್‌ನ ಪಿಚ್ ಸ್ವರೂಪಕ್ಕೆ ತಕ್ಕಂತೆ ಇವರಿಬ್ಬರಲ್ಲಿ ಯಾರನ್ನು ಪ್ರಮುಖ 11 ಆಟಗಾರರಲ್ಲಿ ಇರಿಸಿಕೊಳ್ಳಬೇಕು ಮತ್ತು ಯಾರನ್ನು ‘ಇಂಪ್ಯಾಕ್ಟ್ ಪ್ಲೇಯರ್’ ಆಗಿ ಬಳಸಿಕೊಳ್ಳಬೇಕು ಎಂಬ ಗೊಂದಲ ಮ್ಯಾನೇಜ್‌ಮೆಂಟ್ ಮುಂದಿದೆ.
ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ ಇಲೆವೆನ್
ವಿರಾಟ್ ಕೊಹ್ಲಿ
ಫಿಲ್ ಸಾಲ್ಟ್ / ಜಾಕೋಬ್ ಡಫಿ
ದೇವದತ್ ಪಡಿಕ್ಕಲ್
ರಜತ್ ಪಾಟೀದಾರ್ (ನಾಯಕ)
ವೆಂಕಟೇಶ್ ಅಯ್ಯರ್
ಟಿಮ್ ಡೇವಿಡ್
ಜಿತೇಶ್ ಶರ್ಮಾ
ಕೃಣಾಲ್ ಪಾಂಡ್ಯ
ಭುವನೇಶ್ವರ್ ಕುಮಾರ್
ಜಾಶ್ ಹೇಜಲ್‌ವುಡ್
ಯಶ್ ದಯಾಳ್ / ರಸಿಕ್ ಸಲಾಂ ದಾರ್
ಸುಯಾಶ್ ಶರ್ಮಾ / ರೊಮಾರಿಯೋ ಶೆಫರ್ಡ್



