May 31, 2026
Sunday, May 31, 2026
spot_img

ದಿನ ಭವಿಷ್ಯ: ಉದ್ಯೋಗದಲ್ಲಿ ಉತ್ತಮ ಯಶಸ್ಸು, ಆರ್ಥಿಕ ಪ್ರಗತಿ ಕಾಣುವ ಯೋಗವಿದೆ

ಮೇಷ
ನಿಮ್ಮ ಸುತ್ತಮುತ್ತ ಸಂತೋಷದ ವಾತಾವರಣ. ಮನೆಯಲ್ಲಿ ಸಂಭ್ರಮ. ನೀವೂ ಭಾಗಿಯಾಗಿರಿ.ಸಣ್ಣ ವಿಷಯಕ್ಕೆ ವಾಗ್ವಾದ ನಡೆಸಲು ಹೋಗದಿರಿ.
ವೃಷಭ
ನಿಮ್ಮ ಕಾರ್ಯ ಪೂರೈಸಲು ಹೆಚ್ಚು ಪರಿಶ್ರಮ ಬೇಕು. ಅರ್ಧಕ್ಕೆ ಕೈ ಬಿಡಬೇಡಿ. ವಿವಾಹ ಪ್ರಸ್ತಾಪ ಸ-ಲ. ಆರೋಗ್ಯ ಸಮಸ್ಯೆ ನಿವಾರಣೆ.
ಮಿಥುನ
ಕೌಟುಂಬಿಕ ವಿಚಾರ ಇತ್ಯರ್ಥಕ್ಕೇ ಈ ದಿನ ಮೀಸಲಾಗಲಿದೆ. ಉತ್ಸಾಹ ಹೆಚ್ಚುವ ಬೆಳವಣಿಗೆ. ಕಾರ್ಯ ಪ್ರಗತಿ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ.
ಕಟಕ
ನಿಮ್ಮ ಕಾರ್ಯಕ್ಕೆ ಅವಶ್ಯ ಬೆಂಬಲ ಲಭ್ಯ. ಖರೀದಿ ಹುಮ್ಮಸ್ಸಿನಿಂದ ಖರ್ಚು ಹೆಚ್ಚಬಹುದು. ಆಸ್ತಿ ಖರೀದಿಗೆ ಕಾಲ ಸದ್ಯ ಕೂಡಿಬರದು.
ಸಿಂಹ
ಪ್ರಮುಖ ಕಾರ್ಯ ಇಂದು ಸಾಧಿಸುವಿರಿ. ವೃತ್ತಿಯಲ್ಲಿ ಯಶಸ್ಸು. ಸ್ವಂತ ಉದ್ಯೋಗಿಗಳಿಗೆ ಆರ್ಥಿಕ ಉನ್ನತಿ. ಕೌಟುಂಬಿಕ ಪರಿಸ್ಥಿತಿ ಸಮಾಧಾನಕರ.
ಕನ್ಯಾ
ಯುವಜನರು ಹೆತ್ತವರ ಜತೆ ಸಂಘರ್ಷ ನಡೆಸಿಯಾರು. ಉದ್ದಿಮೆ ಯಲ್ಲಿ ಧನಹಾನಿ. ಇತರರ ಮನಸ್ಸಿಗೆ ಘಾಸಿ ಎಸಗದಿರಿ. ವಿನಯವಿರಲಿ.
ತುಲಾ
ನೀವು ಬಯಸಿದ ಕಾರ್ಯ ಸರಾಗ. ಅಡ್ಡಿಗಳ ನಿವಾರಣೆ. ಖರ್ಚು ಕಡಿಮೆ ಮಾಡಲು ಗಮನ ಕೊಡಿ. ಸಂಬಂಧ ವೃದ್ಧಿಯ ಬೆಳವಣಿಗೆ ಸಂಭವ.
ವೃಶ್ಚಿಕ
ಕೆಲಸದಲ್ಲಿ ಪ್ರಗತಿ. ಹಿರಿಯರ ಮೆಚ್ಚುಗೆ. ಮನೆಯಲ್ಲಿ ಕೆಲವು ಬದಲಾವಣೆ ಆದೀತು. ಆರೋಗ್ಯ ಸಮಸ್ಯೆ ನಿವಾರಣೆ, ನಿರಾಳತೆ.
ಧನು
ಎಲ್ಲ ಸುಸೂತ್ರವಾಗಿ ನಡೆದರೂ ಮನಸ್ಸಿಗೆ ಸಮಾಧಾನವಿರದು. ಏನೋ ಅತೃಪ್ತಿ. ಕೆಲವರ ವರ್ತನೆಗೆ ಅಸಹನೆ. ಧ್ಯಾನ, ಅಧ್ಯಾತ್ಮ ಸಹಕಾರಿ.
ಮಕರ
ಆಪ್ತರ ಜತೆಗಿನ ಭಿನ್ನಮತ ಪರಿಹರಿಸಿ. ಪ್ರೀತಿಗೆ ಸಂಬಂಧಿಸಿದ ಬಿಕ್ಕಟ್ಟು ನಿವಾರಿಸಿ. ವೃತ್ತಿಯಲ್ಲಿ ವಾಗ್ವಾದ, ಸಂಘರ್ಷ ನಡೆದೀತು.
ಕುಂಭ
ಶೀಘ್ರ ಪ್ರಗತಿ ಸಾಽಸಬೇಕು ಎನ್ನುವುದು ನಿಮ್ಮ ಆಸೆ. ತಾಳ್ಮೆ ಬೆಳೆಸಿಕೊಳ್ಳಿ. ದುಡುಕು ಹಾನಿ ತಂದೀತು. ಕೌಟುಂಬಿಕ ಸಹಕಾರ.
ಮೀನ
ಈ ದಿನ ನಿಮಗೆ ಪ್ರತಿಕೂಲ. ಪ್ರಮುಖ ಕಾರ್ಯ ಇಂದು ಬೇಡ. ಸಂಗಾತಿ ಜತೆ ಸಂಘರ್ಷ ಸಂಭವ. ತಾಳ್ಮೆಯ ವ್ಯವಹಾರ ಅಗತ್ಯ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !