May 31, 2026
Sunday, May 31, 2026
spot_img

ಎಲ್ಲವೂ ಇದ್ದರೂ ಮನಸ್ಸಿನಲ್ಲಿ ನೆಮ್ಮದಿ ಇಲ್ಲವೇ? ಇಂದಿನಿಂದಲೇ ಈ ಸರಳ ಸೂತ್ರಗಳನ್ನು ರೂಢಿಸಿಕೊಳ್ಳಿ

ಇಂದಿನ ಆಧುನಿಕ ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ಮನುಷ್ಯನಿಗೆ ಎಲ್ಲವೂ ಇದ್ದರೂ ನೆಮ್ಮದಿ ಮಾತ್ರ ಮರೀಚಿಕೆಯಾಗಿದೆ. “ನನ್ನ ಹತ್ತಿರ ದೊಡ್ಡ ಕಾರಿಲ್ಲ, ಒಳ್ಳೆಯ ಮನೆ ಇಲ್ಲ, ನೆಮ್ಮದಿಯ ಕೆಲಸ ಇಲ್ಲ” ಎಂದು ನಮ್ಮ ಬಳಿ ಇಲ್ಲದಿರುವುದರ ಬಗ್ಗೆ ಯೋಚಿಸಿ ಕೊರಗುವುದರಲ್ಲೇ ನಾವು ದಿನಗಳನ್ನು ಕಳೆಯುತ್ತಿದ್ದೇವೆ. ಆದರೆ, ನಮಗೆ ಸಿಕ್ಕಿರುವ ಈ ಸುಂದರ ಜೀವನದಲ್ಲಿ ಈಗಾಗಲೇ ನಮ್ಮ ಬಳಿ ಇರುವ ಒಳ್ಳೆಯ ವಿಷಯಗಳಿಗೆ ಪ್ರಕೃತಿಗೆ ಅಥವಾ ದೇವರಿಗೆ ಧನ್ಯವಾದ ಹೇಳುವ ‘ಕೃತಜ್ಞತಾ ಭಾವನೆ’ ನಮ್ಮಲ್ಲಿದ್ದರೆ ನಮ್ಮ ಬದುಕು ಎಷ್ಟೋ ಸುಂದರವಾಗುತ್ತದೆ ಗೊತ್ತಾ? ಕೃತಜ್ಞತೆ ಎನ್ನುವುದು ಕೇವಲ ಒಂದು ಶಬ್ದವಲ್ಲ, ಅದು ನಮ್ಮ ಮನಸ್ಸನ್ನು ಧನಾತ್ಮಕತೆಯತ್ತ ತಿರುಗಿಸುವ ಅದ್ಭುತ ಶಕ್ತಿಯಾಗಿದೆ.

ಕೃತಜ್ಞತಾ ಭಾವನೆಯಿಂದ ಜೀವನಕ್ಕಾಗುವ 5 ಅದ್ಭುತ ಪ್ರಯೋಜನಗಳು:

ನಕಾರಾತ್ಮಕ ಆಲೋಚನೆಗಳಿಗೆ ಬ್ರೇಕ್ ಬಿಳುತ್ತದೆ:
ನಾವು ಪ್ರತಿಯೊಂದರಲ್ಲೂ ಕೊರತೆಗಳನ್ನು ಹುಡುಕುವುದನ್ನು ನಿಲ್ಲಿಸಿ, ನಮಗೆ ಸಿಕ್ಕಿರುವ ಸಣ್ಣಪುಟ್ಟ ಸಕಾರಾತ್ಮಕ ವಿಷಯಗಳ ಬಗ್ಗೆ ಗಮನ ಹರಿಸಿದಾಗ ಮನಸ್ಸಿನಲ್ಲಿರುವ ಅಸೂಯೆ, ಕೋಪ ಮತ್ತು ನಿರಾಶೆಯಂತಹ ನಕಾರಾತ್ಮಕ ಭಾವನೆಗಳು ತಾನಾಗಿಯೇ ದೂರವಾಗುತ್ತವೆ.

ಮಾನಸಿಕ ಒತ್ತಡ ಮತ್ತು ಆತಂಕ ದೂರವಾಗುತ್ತದೆ:
ಮಾನಸಿಕ ತಜ್ಞರ ಪ್ರಕಾರ, ಪ್ರತಿದಿನ ಕೃತಜ್ಞತೆಯನ್ನು ವ್ಯಕ್ತಪಡಿಸುವವರಲ್ಲಿ ಒತ್ತಡವನ್ನು ಉಂಟುಮಾಡುವ ‘ಕಾರ್ಟಿಸೋಲ್’ ಹಾರ್ಮೋನ್ ಮಟ್ಟ ಕಡಿಮೆಯಾಗುತ್ತದೆ. ಇದು ಆತಂಕ ಮತ್ತು ಖಿನ್ನತೆಯನ್ನು ದೂರವಿಟ್ಟು ಮನಸ್ಸಿಗೆ ನೆಮ್ಮದಿ ನೀಡುತ್ತದೆ.

ಸಂಬಂಧಗಳು ಗಟ್ಟಿಯಾಗುತ್ತವೆ:
ನಮ್ಮ ಜೀವನದಲ್ಲಿ ಸಹಾಯ ಮಾಡಿದ ಸ್ನೇಹಿತರು, ಕಷ್ಟ ಕಾಲದಲ್ಲಿ ಜೊತೆಗಿದ್ದ ಕುಟುಂಬದವರು ಅಥವಾ ಕಚೇರಿಯಲ್ಲಿ ಸಹಕರಿಸಿದ ಸಹೋದ್ಯೋಗಿಗಳಿಗೆ ನಾವು ಮನಸಾರೆ ಧನ್ಯವಾದ ಹೇಳಿದಾಗ, ಅವರೊಂದಿಗಿನ ನಮ್ಮ ಬಾಂಧವ್ಯ ಮತ್ತು ಗೌರವ ಮತ್ತಷ್ಟು ಹೆಚ್ಚುತ್ತದೆ.

ಆತ್ಮವಿಶ್ವಾಸ ಹೆಚ್ಚುತ್ತದೆ:
ಇತರರ ಜೀವನದೊಂದಿಗೆ ನಮ್ಮನ್ನು ಹೋಲಿಕೆ ಮಾಡಿಕೊಳ್ಳುವುದನ್ನು ಕೃತಜ್ಞತಾ ಭಾವನೆ ತಪ್ಪಿಸುತ್ತದೆ. ನಮ್ಮಲ್ಲಿರುವ ಸಾಮರ್ಥ್ಯ ಮತ್ತು ನಮಗೆ ಸಿಕ್ಕಿರುವ ಅವಕಾಶಗಳ ಬಗ್ಗೆ ನಮಗೆ ಹೆಮ್ಮೆ ಮೂಡಿದಾಗ ಆಂತರಿಕವಾಗಿ ಆತ್ಮವಿಶ್ವಾಸ ದುಪ್ಪಟ್ಟಾಗುತ್ತದೆ.

ನೆಮ್ಮದಿಯ ನಿದ್ದೆ ಮತ್ತು ದೈಹಿಕ ಆರೋಗ್ಯ:
ರಾತ್ರಿ ಮಲಗುವ ಮುನ್ನ ದಿನವಿಡೀ ನಡೆದ ಒಳ್ಳೆಯ ಘಟನೆಗಳನ್ನು ನೆನೆದು ಕೃತಜ್ಞತೆ ಸಲ್ಲಿಸುವುದರಿಂದ ಮೆದುಳು ಶಾಂತವಾಗುತ್ತದೆ. ಇದು ಉತ್ತಮ ನಿದ್ದೆಗೆ ಸಹಾಯ ಮಾಡುವುದಲ್ಲದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಕೃತಜ್ಞತಾ ಹವ್ಯಾಸವನ್ನು ದಿನನಿತ್ಯದ ಬದುಕಿನಲ್ಲಿ ರೂಢಿಸಿಕೊಳ್ಳುವುದು ಹೇಗೆ?

ಕೃತಜ್ಞತಾ ಡೈರಿ ಬರೆಯಬೇಕು:
ಪ್ರತಿದಿನ ರಾತ್ರಿ ಮಲಗುವ ಮುನ್ನ ದಿನದಲ್ಲಿ ನಡೆದ ಕನಿಷ್ಠ 3 ಒಳ್ಳೆಯ ವಿಷಯಗಳನ್ನು ಒಂದು ಪುಸ್ತಕದಲ್ಲಿ ಬರೆಯಬೇಕು.

ಮನಸಾರೆ ಧನ್ಯವಾದ ಹೇಳಬೇಕು:
ದಿನವಿಡೀ ನಿಮಗೆ ಸಹಾಯ ಮಾಡುವ ಆಟೋ ಚಾಲಕರು, ಮನೆಗೆ ಪಾರ್ಸೆಲ್ ತರುವ ಡೆಲಿವರಿ ಬಾಯ್ ಅಥವಾ ನಿಮಗಾಗಿ ಅಡುಗೆ ಮಾಡುವ ತಾಯಿಗೆ ಮುಖದಲ್ಲಿ ನಗು ಮುಖ ಹೊತ್ತು ‘ಥ್ಯಾಂಕ್ಸ್’ ಹೇಳಬೇಕು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !