ಹೊಸದಿಗಂತ ಡಿಜಿಟಲ್ ಡೆಸ್ಕ್:
ಫ್ಲೈ ದುಬೈ ವಿಮಾನದಲ್ಲಿ ಟೆಲ್ ಅವಿವ್ಗೆ ಹೋಗುತ್ತಿದ್ದಾಗ ಸಹ ಪೈಲಟ್ನ ದಾಳಿಗೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಆರೋಗ್ಯ ಸ್ಥಿತಿ ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿದೆ.
ದಾಳಿಯಲ್ಲಿ ಸ್ಮಿತ್ ಮಚ್ಚರ್ ತಲೆಬುರುಡೆ ಮುರಿದುಹೋಗಿದೆ, ದೃಷ್ಟಿಯಲ್ಲಿ ದೋಷ ಉಂಟಾಗಿದೆ ಹಾಗೂ ತೀವ್ರ ತಲೆನೋವಿನಿಂದ ಬಳಲುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸೌದಿ ಅರೇಬಿಯಾದಲ್ಲಿ ತಲೆ ಬುರುಡೆಯ ಶಸ್ತ್ರಚಿಕಿತ್ಸೆ ನಡೆದಿದ್ದು, ಇದೀಗ ಅವರನ್ನು ಯುನೈಟೆಡ್ ಅರಬ್ ಎಮಿರೈಟ್ಸ್ಗೆ ಕರೆದೊಯ್ಯಲಾಗಿದೆ.
ಯುಎಐ ವೈದ್ಯರು ಅವರ ದೃಷ್ಟಿ ಹಾಗೂ ನರವೈಜ್ಞಾನಿಕ ಸ್ಥಿತಿಯನ್ನು ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಕ್ಯಾಪ್ಟನ್ ಮೇಲೆ ಕೊಡಲಿ ದಾಳಿಯಾದ ಕಾರಣ ತಲೆಬುರುಡೆ ಮುರಿದುಹೋಗಿತ್ತು. ಅದರಿಂದಾಗಿ ದೃಷ್ಟಿ ಹಾಗೂ ನರವೈಜ್ಞಾನಿಕ ವ್ಯವಸ್ಥೆಗೂ ಹಾನಿಯಾಗಿತ್ತು. ಸದ್ಯ ತೀವ್ರ ತಲೆನೋವು ಸ್ಮಿತ್ ಅವರನ್ನು ಬಾಧಿಸುತ್ತಿದೆ. ನೋವನ್ನು ನಿವಾರಿಸಲು ಅವರಿಗೆ ಹೆಚ್ಚಿನ ಪ್ರಮಾಣದ ನಿದ್ರಾಜನಕ ನೀಡಲಾಗುತ್ತಿದೆ. ಆದಾಗ್ಯೂ, ಈ ಕಠಿಣ ಪರಿಸ್ಥಿತಿಯಲ್ಲೂ ಸ್ಮಿತ್ ಇನ್ನೂ ನಗು ನಗುತ್ತಾ ಇದ್ದಾರೆ. ಅವರು ಸಕಾರಾತ್ಮಕವಾಗಿದ್ದಾರೆ ಮತ್ತು ಮತ್ತೆ ಹಾರಾಟ ನಡೆಸುವ ಬಯಕೆಯನ್ನು ಪದೇ ಪದೇ ಹೇಳಿದ್ದಾರೆ ಎಂದು ಮೂಲಗಳು ಹೇಳುತ್ತವೆ.



