May 31, 2026
Sunday, May 31, 2026
spot_img

Snacks | ಮಳೆ ಬಂದಿದೆ… ಪ್ಲೇಟ್ ನಲ್ಲಿ ಬಿಸಿಬಿಸಿ ಮ್ಯಾಗಿ ರೋಲ್ ಇದ್ರೆ ಸಾಕು ಅಲ್ವಾ

ಮಳೆ ಬರ್ತಿದೆ ಸಂಜೆ ಚಹಾದ ಜೊತೆ ಏನಾದ್ರು ಬಿಸಿ ಬಿಸಿ ತಿನ್ಬೇಕು ಅಂತಿದ್ರೆ ಮ್ಯಾಗಿ ರೋಲ್ ಟ್ರೈ ಮಾಡಿ. ಮ್ಯಾಗಿ ಮತ್ತು ಚಪಾತಿಯ ಕಾಂಬಿನೇಷನ್‌ನಿಂದ ತಯಾರಾಗುವ ಈ ಸ್ನ್ಯಾಕ್ ತುಂಬಾ ರುಚಿಕರವಾಗಿರುತ್ತದೆ.

ಬೇಕಾಗುವ ಪದಾರ್ಥಗಳು

ಮ್ಯಾಗಿ ಸ್ಟಫಿಂಗ್‌ಗೆ
ಮ್ಯಾಗಿ ನೂಡಲ್ಸ್ – 2 ಪ್ಯಾಕೆಟ್
ಮ್ಯಾಗಿ ಟೇಸ್ಟ್ ಮೇಕರ್ – 2 ಪ್ಯಾಕೆಟ್
ಈರುಳ್ಳಿ – 1 (ಸಣ್ಣದಾಗಿ ಹೆಚ್ಚಿದ್ದು)
ಕ್ಯಾರೆಟ್ – 1 (ತುರಿದದ್ದು)
ಕ್ಯಾಪ್ಸಿಕಮ್ – ½ ಕಪ್ (ಸಣ್ಣದಾಗಿ ಹೆಚ್ಚಿದ್ದು)
ಹಸಿಮೆಣಸಿನಕಾಯಿ – 1
ಟೊಮೆಟೊ ಕೆಚಪ್ – 1 ಚಮಚ
ಸೋಯಾ ಸಾಸ್ – 1 ಚಮಚ (ಐಚ್ಛಿಕ)
ಎಣ್ಣೆ – 1 ಚಮಚ

ರೋಲ್‌ಗೆ
ಗೋಧಿ ಹಿಟ್ಟು ಅಥವಾ ಮೈದಾ – 1 ಕಪ್
ಉಪ್ಪು – ಚಿಟಿಕೆ
ನೀರು – ಹಿಟ್ಟು ಕಲೆಸಲು
ಎಣ್ಣೆ – ಅಗತ್ಯವಿರುವಷ್ಟು

ತಯಾರಿಸುವ ವಿಧಾನ

ಗೋಧಿ ಹಿಟ್ಟು ಅಥವಾ ಮೈದಾಗೆ ಉಪ್ಪು ಸೇರಿಸಿ ನೀರು ಹಾಕಿ ಮೃದುವಾಗಿ ಕಲೆಸಿ. 15 ನಿಮಿಷ ಮುಚ್ಚಿ ಇಡಿ.

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಈರುಳ್ಳಿ, ಕ್ಯಾರೆಟ್, ಕ್ಯಾಪ್ಸಿಕಮ್ ಹಾಗೂ ಹಸಿಮೆಣಸಿನಕಾಯಿ ಹಾಕಿ ಸ್ವಲ್ಪ ಹುರಿಯಿರಿ. ನಂತರ 1½ ಕಪ್ ನೀರು ಸೇರಿಸಿ ಕುದಿಸಿ. ಮ್ಯಾಗಿ ನೂಡಲ್ಸ್ ಹಾಗೂ ಟೇಸ್ಟ್ ಮೇಕರ್ ಸೇರಿಸಿ ಬೇಯಿಸಿ.

ನೀರು ಸಂಪೂರ್ಣ ಹೀರಿಕೊಂಡ ಬಳಿಕ ಕೆಚಪ್ ಮತ್ತು ಸೋಯಾ ಸಾಸ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಸ್ಟಫಿಂಗ್ ಸಿದ್ಧ.

ಹಿಟ್ಟಿನಿಂದ ತೆಳುವಾದ ಚಪಾತಿ ಅಥವಾ ಪರೋಟಾ ಲಟ್ಟಿಸಿ ಬೇಯಿಸಿಕೊಳ್ಳಿ. ಚಪಾತಿಯ ಮಧ್ಯಭಾಗದಲ್ಲಿ ಮ್ಯಾಗಿ ಮಿಶ್ರಣ ಇಟ್ಟು ಬಿಗಿಯಾಗಿ ರೋಲ್ ಮಾಡಿ.

ರೋಲ್‌ನ್ನು ತವಾದ ಮೇಲೆ ಸ್ವಲ್ಪ ಎಣ್ಣೆ ಹಾಕಿ ಎರಡೂ ಬದಿಗಳಲ್ಲಿ ಗೋಲ್ಡನ್ ಬಣ್ಣ ಬರುವವರೆಗೆ ಹುರಿಯಿರಿ.

ಬಿಸಿಬಿಸಿಯಾದ ಮ್ಯಾಗಿ ರೋಲ್ ಅನ್ನು ಟೊಮೆಟೊ ಕೆಚಪ್, ಚಿಲ್ಲಿ ಸಾಸ್ ಅಥವಾ ಮಯೋನೇಸ್ ಜೊತೆ ಸವಿಯಿರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !