ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮತ್ತೆ ಬಿಟ್ ಕಾಯಿನ್ ಬಹುಕೋಟಿ ಹಗರಣ ಪ್ರಕರಣ ಸದ್ದು ಮಾಡಿದ್ದು, ಈ ಸಂಬಂಧ ಕಾಂಗ್ರೆಸ್ ಯುವ ಮುಖಂಡ ಮೊಹಮ್ಮದ್ ನಲಪಾಡ್ ಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ನೀಡಿದೆ.
ಈ ಪ್ರಕರಣ ಸಂಬಂಧ ಈಗಾಗಲೇ ಇಡಿ ಅಧಿಕಾರಿಗಳು ಶ್ರೀಕಿ, ಸುನೇಶ್ ಹೆಗ್ಡೆ, ರಾಬಿನ್ ಖಂಡೇವಾಲ ಎಂಬವರನ್ನು ಬಂಧಿಸಿದ್ದು, ಇದೀಗ ಜೂ.1 ಸೋಮವಾರದಂದೇ ವಿಚಾರಣೆ ಹಾಜರಾಗುವಂತೆ ನಲಪಾಡ್ ಗೆ ಸೂಚಿಸಿದೆ.
ಎರಡನೇ ಬಾರಿ ನೊಟೀಸ್ ಜಾರಿ
ನಲಪಾಡ್ ಗೆ ಇಡಿ ನೀಡುವ ಎರಡನೇ ಬಾರಿ ನೊಟೀಸ್ ಇದಾಗಿದ್ದು, ಇದಕ್ಕೂ ಮುನ್ನ ರಾಜಕೀಯ ಕಾರ್ಯಕ್ರಮ ಹಿನ್ನೆಲೆ ಮೊದಲ ನೊಟೀಸ್ ಗೆ ನಲಪಾಡ್ ಹಾಜರಾಗಿರಲಿಲ್ಲ. ಇದೀಗ ಎರಡನೇ ಬಾರಿ ಇಡಿ ನೋಟಿಸ್ ಜಾರಿ ಮಾಡಿದ್ದು,ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.



