May 31, 2026
Sunday, May 31, 2026
spot_img

ಬಿಟ್‌ ಕಾಯಿನ್‌ ಬಹುಕೋಟಿ ಹಗರಣ ಕೇಸ್: ಮೊಹಮ್ಮದ್ ನಲಪಾಡ್ ಗೆ ಮತ್ತೆ ವಿಚಾರಣೆಗೆ ಹಾಜರಾಗಲು ಇಡಿ ಸಮನ್ಸ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಮತ್ತೆ ಬಿಟ್‌ ಕಾಯಿನ್‌ ಬಹುಕೋಟಿ ಹಗರಣ ಪ್ರಕರಣ ಸದ್ದು ಮಾಡಿದ್ದು, ಈ ಸಂಬಂಧ ಕಾಂಗ್ರೆಸ್ ಯುವ ಮುಖಂಡ ಮೊಹಮ್ಮದ್ ನಲಪಾಡ್ ಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್‌ ನೀಡಿದೆ.

ಈ ಪ್ರಕರಣ ಸಂಬಂಧ ಈಗಾಗಲೇ ಇಡಿ ಅಧಿಕಾರಿಗಳು ಶ್ರೀಕಿ, ಸುನೇಶ್ ಹೆಗ್ಡೆ, ರಾಬಿನ್ ಖಂಡೇವಾಲ ಎಂಬವರನ್ನು ಬಂಧಿಸಿದ್ದು, ಇದೀಗ ಜೂ.1 ಸೋಮವಾರದಂದೇ ವಿಚಾರಣೆ ಹಾಜರಾಗುವಂತೆ ನಲಪಾಡ್ ಗೆ ಸೂಚಿಸಿದೆ.

ಎರಡನೇ ಬಾರಿ ನೊಟೀಸ್​ ಜಾರಿ

ನಲಪಾಡ್ ಗೆ ಇಡಿ ನೀಡುವ ಎರಡನೇ ಬಾರಿ ನೊಟೀಸ್​ ಇದಾಗಿದ್ದು, ಇದಕ್ಕೂ ಮುನ್ನ ರಾಜಕೀಯ ಕಾರ್ಯಕ್ರಮ ಹಿನ್ನೆಲೆ ಮೊದಲ ನೊಟೀಸ್ ಗೆ ನಲಪಾಡ್​​ ಹಾಜರಾಗಿರಲಿಲ್ಲ. ಇದೀಗ ಎರಡನೇ ಬಾರಿ ಇಡಿ ನೋಟಿಸ್​ ಜಾರಿ ಮಾಡಿದ್ದು,ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !