ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ನಡೆದ ಒಂದು ಕ್ಯಾಚ್ ವಿವಾದ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಗುಜರಾತ್ ಟೈಟಾನ್ಸ್ ಬ್ಯಾಟರ್ ವಾಷಿಂಗ್ಟನ್ ಸುಂದರ್‌ಗೆ ಸಂಬಂಧಿಸಿದ ತೀರ್ಪಿನ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಪ್ರಶ್ನೆ ಎತ್ತಿದ್ದಾರೆ.
ಸುಂದರ್ ಕ್ಯಾಚ್‌ಗೆ ನಾಟೌಟ್ ತೀರ್ಪು
ಗುಜರಾತ್ ಇನ್ನಿಂಗ್ಸ್ ವೇಳೆ ವಾಷಿಂಗ್ಟನ್ ಸುಂದರ್ ಹೊಡೆದ ಶಾಟ್ ಅನ್ನು ಬೌಂಡರಿ ಸಮೀಪ ಜೋರ್ಡಾನ್ ಕಾಕ್ಸ್ ಡೈವ್ ಮಾಡಿ ಹಿಡಿದಿದ್ದರು. ಮೈದಾನದಲ್ಲಿದ್ದ ಆಟಗಾರರು ಕ್ಯಾಚ್ ಪಡೆದಿರುವ ವಿಶ್ವಾಸದಲ್ಲಿದ್ದರೂ, ಅಂತಿಮ ನಿರ್ಧಾರವನ್ನು ಮೂರನೇ ಅಂಪೈರ್‌ಗೆ ಒಪ್ಪಿಸಲಾಯಿತು.
ರಿಪ್ಲೇನಲ್ಲಿ ಕಂಡ ಅನುಮಾನ
ಟೆಲಿವಿಷನ್ ದೃಶ್ಯಾವಳಿಗಳ ಪರಿಶೀಲನೆಯ ಬಳಿಕ ಚೆಂಡು ನೆಲಕ್ಕೆ ಸ್ಪರ್ಶಿಸಿರುವ ಸಾಧ್ಯತೆ ಇದೆ ಎಂದು ಪರಿಗಣಿಸಿ ಸುಂದರ್‌ಗೆ ನಾಟೌಟ್ ತೀರ್ಪು ನೀಡಲಾಯಿತು. ಈ ನಿರ್ಧಾರ ಪಂದ್ಯದ ಮಧ್ಯೆಯೇ ಚರ್ಚೆಗೆ ಗ್ರಾಸವಾಯಿತು.
ಇದನ್ನೂ ಓದಿ:
ಹಳೆಯ ಘಟನೆಯನ್ನು ನೆನಪಿಸಿದ ಅಭಿಮಾನಿಗಳು
ಇದೇ ಋತುವಿನಲ್ಲಿ ಈಗ ನಡೆಯುತ್ತಿರುವ ಆರ್‌ಸಿಬಿ-ಗುಜರಾತ್ ಮುಖಾಮುಖಿಯಲ್ಲಿ ರಜತ್ ಪಾಟಿದಾರ್ ಕ್ಯಾಚ್ ಔಟ್ ಆದ ಘಟನೆ ಮತ್ತೆ ಚರ್ಚೆಗೆ ಬಂದಿದೆ. ಆ ವೇಳೆ ಜೇಸನ್ ಹೋಲ್ಡರ್ ಹಿಡಿದ ಕ್ಯಾಚ್‌ನಲ್ಲೂ ಚೆಂಡು ನೆಲಕ್ಕೆ ತಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ
ಎರಡು ಘಟನೆಗಳ ನಡುವೆ ಸಾಮ್ಯತೆ ಕಂಡ ಅಭಿಮಾನಿಗಳು, ಒಂದಕ್ಕೆ ಔಟ್ ಮತ್ತು ಮತ್ತೊಂದಕ್ಕೆ ನಾಟೌಟ್ ತೀರ್ಪು ನೀಡಿರುವುದೇಕೆ ಎಂದು ಪ್ರಶ್ನಿಸುತ್ತಿದ್ದಾರೆ. ಫೈನಲ್ ಪಂದ್ಯದ ಈ ತೀರ್ಪು ಈಗ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.



