August 20, 2026
Thursday, August 20, 2026
spot_img

ಫೈನಲ್ ಮುಗಿಯುವ ಮುನ್ನವೇ ನಿರ್ಧಾರ ಆಗೋಯ್ತು: ಆರೆಂಜ್ ಕ್ಯಾಪ್ ಮೇಲೆ ‘ವೈಭವ್’ ಮುದ್ರೆ ಬಿದ್ದಾಯ್ತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರ ಫೈನಲ್ ಪಂದ್ಯ ನಡೆಯುತ್ತಿದ್ದರೂ, ಟೂರ್ನಿಯ ಅತ್ಯುತ್ತಮ ರನ್‌ ಸ್ಕೋರರ್‌ಗೆ ನೀಡಲಾಗುವ ಪ್ರತಿಷ್ಠಿತ ಆರೆಂಜ್ ಕ್ಯಾಪ್ ಯಾರಿಗೆ ಸಿಗಲಿದೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ರಾಜಸ್ಥಾನ್ ರಾಯಲ್ಸ್‌ನ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಈ ಗೌರವವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕೊನೆಯ ಕ್ಷಣದವರೆಗೂ ಇತ್ತು ಪೈಪೋಟಿ

ಲೀಗ್ ಹಂತ ಹಾಗೂ ಪ್ಲೇಆಫ್‌ಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ವೈಭವ್, ರನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು. ಆದರೆ ಫೈನಲ್ ಆಡುತ್ತಿದ್ದ ಗುಜರಾತ್ ಟೈಟಾನ್ಸ್‌ನ ಶುಭ್‌ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅವರಿಗೆ ಅವರನ್ನು ಹಿಂದಿಕ್ಕುವ ಅವಕಾಶ ಇತ್ತು.

ಫೈನಲ್‌ನಲ್ಲಿ ಕೈಕೊಟ್ಟ ಬ್ಯಾಟ್

ಆರೆಂಜ್ ಕ್ಯಾಪ್ ಗೆಲ್ಲಲು ಗಿಲ್ ಮತ್ತು ಸುದರ್ಶನ್ ಇಬ್ಬರಿಗೂ ದೊಡ್ಡ ಇನ್ನಿಂಗ್ಸ್ ಅಗತ್ಯವಿತ್ತು. ಆದರೆ ಮಹತ್ವದ ಪಂದ್ಯದಲ್ಲಿ ಇಬ್ಬರೂ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರು. ಪರಿಣಾಮವಾಗಿ ವೈಭವ್ ಅವರ ಸ್ಥಾನ ಅಚಲವಾಗಿಯೇ ಉಳಿಯಿತು.

ಇದನ್ನೂ ಓದಿ:

ವೈಭವ್‌ರ ಅದ್ಭುತ ಸೀಸನ್

ಈ ಆವೃತ್ತಿಯಲ್ಲಿ ವೈಭವ್ ಸೂರ್ಯವಂಶಿ 16 ಪಂದ್ಯಗಳಲ್ಲಿ 776 ರನ್‌ಗಳನ್ನು ಕಲೆಹಾಕಿ ಅಸಾಧಾರಣ ಸ್ಥಿರತೆ ಪ್ರದರ್ಶಿಸಿದರು. ಅವರ ಹಲವು ನಿರ್ಣಾಯಕ ಇನ್ನಿಂಗ್ಸ್‌ಗಳು ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದವು.

ಕಿರಿಯ ವಯಸ್ಸಿನಲ್ಲೇ ದೊಡ್ಡ ಸಾಧನೆ

ಆರೆಂಜ್ ಕ್ಯಾಪ್ ಗೆಲ್ಲುವ ಮೂಲಕ ವೈಭವ್ ಹೊಸ ದಾಖಲೆ ಬರೆದಿದ್ದಾರೆ. ಅತಿ ಕಿರಿಯ ವಯಸ್ಸಿನಲ್ಲಿ ಈ ಗೌರವ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದು, ಭವಿಷ್ಯದ ಸೂಪರ್‌ಸ್ಟಾರ್ ಆಗಿ ಗಮನ ಸೆಳೆದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !