June 1, 2026
Monday, June 1, 2026
spot_img

CINE | ಕಾಕ್ಟೇಲ್‌ ಸಿನಿಮಾಗಾಗಿ ತಮ್ಮ ವೃತ್ತಿಯಲ್ಲೇ ಗರಿಷ್ಠ ಸಂಭಾವನೆ ಪಡೆದ ಕೂರ್ಗ್‌ ಬ್ಯೂಟಿ ರಶ್ಮಿಕಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ರಶ್ಮಿಕಾ ಮಂದಣ್ಣ ತಮ್ಮ ಬಣ್ಣದ ಬದುಕಿನ ಲೋಕದಲ್ಲಿ ಪೀಕ್‌ನಲ್ಲಿದ್ದಾರೆ. ಇದೀಗ ರಶ್ಮಿಕಾ ಸಿನಿಮಾಗಳಿಗೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದು, ಬಾಲಿವುಡ್‌ ನಟಿಯರ ಸಮಕ್ಕೇ ಬಂದಿದ್ದಾರೆ.

ಶಾಹಿದ್‌ ಕಪೂರ್‌, ಕ್ರಿತಿ ಸೆನೋನ್‌ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಕಾಕ್ಟೇಲ್‌-2 ಸಿನಿಮಾಕ್ಕಾಗಿ ರಶ್ಮಿಕಾ ಮಂದಣ್ಣ ಬರೋಬ್ಬರಿ 15 ಕೋಟಿ ಸಂಭಾವನೆ ಪಡೆದಿದ್ದಾರೆ. ಬಾಲಿವುಡ್‌ನಲ್ಲಿ ಅನೇಕ ವರ್ಷಗಳ ಹಿಂದೆ ಬಂದು ಜಾಗ ಗಿಟ್ಟಿಸಿಕೊಂಡಿರುವ ಕ್ರಿತಿ ಸೆನೋನ್‌ಗೂ ಇಷ್ಟೇ ಸಂಭಾವನೆ.

ಶಾಹಿದ್‌ ಕಪೂರ್‌ ಈ ಸಿನಿಮಾಗೆ ೩೫ ಕೋಟಿ ರೂಪಾಯಿ ಪಡೆದಿದ್ದಾರೆ. ರಶ್ಮಿಕಾಗೆ ಛಾವಾ ಸಿನಿಮಾ ದೊಡ್ಡ ಬ್ರೇಕ್‌ ನೀಡಿದೆ. ಛಾವಾ ನಂತರ ಅವರ ಸಂಭಾವನೆ ದೊಡ್ಡ ಮಟ್ಟಕ್ಕೆ ಏರಿದ್ದು, ಇನ್ನು ಕನ್ನಡಕ್ಕೆ ವಾಪಾಸ್‌ ಬರೋದು ಅನುಮಾನವಾಗಿದೆ. ಕಾಕ್ಟೇಲ್ 2’ ಸಿನಿಮಾ ಜೂನ್ 19ರಂದು ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಕಾದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !