ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ತಮ್ಮ ಬಣ್ಣದ ಬದುಕಿನ ಲೋಕದಲ್ಲಿ ಪೀಕ್‌ನಲ್ಲಿದ್ದಾರೆ. ಇದೀಗ ರಶ್ಮಿಕಾ ಸಿನಿಮಾಗಳಿಗೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದು, ಬಾಲಿವುಡ್ ನಟಿಯರ ಸಮಕ್ಕೇ ಬಂದಿದ್ದಾರೆ.
ಶಾಹಿದ್ ಕಪೂರ್, ಕ್ರಿತಿ ಸೆನೋನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಕಾಕ್ಟೇಲ್-2 ಸಿನಿಮಾಕ್ಕಾಗಿ ರಶ್ಮಿಕಾ ಮಂದಣ್ಣ ಬರೋಬ್ಬರಿ 15 ಕೋಟಿ ಸಂಭಾವನೆ ಪಡೆದಿದ್ದಾರೆ. ಬಾಲಿವುಡ್‌ನಲ್ಲಿ ಅನೇಕ ವರ್ಷಗಳ ಹಿಂದೆ ಬಂದು ಜಾಗ ಗಿಟ್ಟಿಸಿಕೊಂಡಿರುವ ಕ್ರಿತಿ ಸೆನೋನ್‌ಗೂ ಇಷ್ಟೇ ಸಂಭಾವನೆ.
ಶಾಹಿದ್ ಕಪೂರ್ ಈ ಸಿನಿಮಾಗೆ ೩೫ ಕೋಟಿ ರೂಪಾಯಿ ಪಡೆದಿದ್ದಾರೆ. ರಶ್ಮಿಕಾಗೆ ಛಾವಾ ಸಿನಿಮಾ ದೊಡ್ಡ ಬ್ರೇಕ್ ನೀಡಿದೆ. ಛಾವಾ ನಂತರ ಅವರ ಸಂಭಾವನೆ ದೊಡ್ಡ ಮಟ್ಟಕ್ಕೆ ಏರಿದ್ದು, ಇನ್ನು ಕನ್ನಡಕ್ಕೆ ವಾಪಾಸ್ ಬರೋದು ಅನುಮಾನವಾಗಿದೆ. ಕಾಕ್ಟೇಲ್ 2’ ಸಿನಿಮಾ ಜೂನ್ 19ರಂದು ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಕಾದಿದ್ದಾರೆ.



