June 1, 2026
Monday, June 1, 2026
spot_img

ಜೆಲ್ಲಿ ತುಂಬಿದ್ದ ಟ್ಯಾಕ್ಟರ್ ಪಲ್ಟಿ: ಚಾಲಕನ ದಾರುಣ ಅಂತ್ಯ

ಹೊಸದಿಗಂತ ವರದಿ ಅಂಕೋಲಾ:

ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಜೆಲ್ಲಿ ಸಾಗಿಸುತ್ತಿದ್ದ ಟ್ಯಾಕ್ಟರ್ ಉರುಳಿ ಚಾಲಕ ಮತ್ತು ಕೂಲಿಕಾರ್ಮಿಕ ಕೆಲಸ ಮಾಡುತ್ತಿದ್ದ ವ್ಯಕ್ತಿ ಮೃತಪಟ್ಟ ಘಟನೆ ತಾಲೂಕಿನ ಹೊನ್ನೆಬೈಲಿನಲ್ಲಿ ಸಂಭವಿಸಿದೆ.

ಕಲಘಟಗಿ ನಿವಾಸಿ ಶಂಭುಲಿಂಗಪ್ಪ ಎನ್ ಬೊಮ್ಮನಹಳ್ಳಿ(35) ಎಂಬಾತನೇ ಮೃತ ದುರ್ದೈವಿಯಾಗಿದ್ದು ಹೊನ್ನೆಬೈಲ್ ಗ್ರಾಮದ ಎತ್ತರದ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ನೀರಿನ ಟ್ಯಾಂಕ್ ಕಾಮಗಾರಿಗೆ ಟ್ಯಾಕ್ಟರಿನಲ್ಲಿ ಜೆಲ್ಲಿ ಕಲ್ಲು ತುಂಬಿ ಸಾಗಿಸುವ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ:

ಎತ್ತರ ಪ್ರದೇಶದಲ್ಲಿ ಟ್ಯಾಂಕ್ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದ್ದು ಜೆಲ್ಲಿಕಲ್ಲು ತುಂಬಿದ ಟ್ಯಾಕ್ಟರಿನ ಮುಂಭಾಗದ ಮೇಲೆತ್ತಿದಂತಾಗಿ ಉರುಳಿ ಬಿದ್ದಿದ್ದು ಟ್ಯಾಕ್ಟರ್ ಅಡಿ ಸಿಲುಕಿಕೊಂಡಿದ್ದ ಕಾರ್ಮಿಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !