June 2, 2026
Tuesday, June 2, 2026
spot_img

ಒಂದು ಕಿಲೋಮೀಟರ್‌ ದೂರ ಅಷ್ಟೇ ಇದ್ರೆ ನಡೆದುಕೊಂಡೇ ಹೋಗಿ! ಮಾಲೀನ್ಯ ತಗ್ಗಿಸೋಕೆ ಜಿಬಿಎ ಪ್ಲಾನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಧಾನಿ ಬೆಂಗಳೂರಿನಲ್ಲಿ ಮಾಲೀನ್ಯವನ್ನು ತಡೆಗಟ್ಟೋದಕ್ಕೆ ಜಿಬಿಎ ಹೊಸ ಪ್ಲಾನ್‌ ಒಂದನ್ನು ರೆಡಿ ಮಾಡಿದೆ. ಜೂನ್‌ ತಿಂಗಳಿನಲ್ಲಿ ಬರೀ ಒಂದು ಕಿಲೋಮೀಟರ್‌ ಅಷ್ಟೇ ದೂರ ಇರುವ ಸ್ಥಳಗಳಿಗೆ ಬಸ್‌, ಕ್ಯಾಬ್‌, ಆಟೋ, ಸ್ಕೂಟರ್‌ ಬಳಸದೇ ವಾಕ್‌ ಮಾಡಿ ಎಂದು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಹೇಳಿದೆ.

ಈ ಅಭಿಯಾನಕ್ಕೆ ಒಂದು ಕಿಲೋಮೀಟರ್‌ ಚಾಲೆಂಜ್‌ ಎಂದು ಹೆಸರಿಡಲಾಗಿದೆ. ಒಂದು ಕಿಲೋಮೀಟರ್‌ ವ್ಯಾಪ್ತಿಯ ಸಂಚಾರಕ್ಕೆ ವಾಹನಗಳನ್ನು ಬಳಸದೇ ನಡೆದುಕೊಂಡು ಹೋಗೋದು ಅಭಿಯಾನದ ಏಕೈಕ ಉದ್ದೇಶ. ಈ ರೀತಿ ಚಾಲೆಂಜ್‌ ಕಂಪ್ಲೀಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬಹುದಾಗಿದೆ.

ಜಿಬಿಎನ ಕ್ಲೈಮೇಟ್‌ ಆಕ್ಷನ್‌ ಸೆಲ್‌ ಈ ಅಭಿಯಾನವನ್ನು ಆರಂಭಿಸಿದೆ. ಜನ ಒಂದು ಕಿಲೋಮೀಟರ್‌ ಕೂಡ ವಾಕ್‌ ಮಾಡೋಕೆ ಇಷ್ಟಪಡೋದಿಲ್ಲ. ಹತ್ತು ನಿಮಿಷ ನಡೆದರೆ ಡೆಸ್ಟಿನೇಷನ್‌ ಸಿಕ್ಕಿಬಿಡುತ್ತದೆ. ಆದರೆ ಈ ರೀತಿ ಸಣ್ಣ ಪುಟ್ಟ ಡಿಸ್ಟೆನ್ಸ್‌ಗೂ ಕೂಡ ಜನ ವಾಹನಗಳನ್ನು ಬಳಸುತ್ತಿದ್ದಾರೆ. ಇದು ನಿಲ್ಲಬೇಕು. ಹತ್ತು ನಿಮಿಷ ನಡೆದರೆ ಭೂಮಿಗೂ ಒಳ್ಳೆಯದು ಹಾಗೂ ಆರೋಗ್ಯಕ್ಕೂ ಉತ್ತಮ ಎಂದು ಹೇಳಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಚಾಲೆಂಜ್‌ ಬಗ್ಗೆ ಜಾಗೃತಿ ಮೂಡಿಸಿ, ನಿಮ್ಮವರಿಗೂ ಚಾಲೆಂಜ್‌ ನೀಡಿ ಎಂದು ಜಿಬಿಎ ಹೇಳಿದೆ. ಆದರೆ ಜನ ಇದಕ್ಕೆ ಗರಂ ಆಗಿದ್ದಾರೆ. ಕಚೇರಿಯಲ್ಲಿ ಕೂತು ಪ್ಲಾನ್‌ ಮಾಡೋದಲ್ಲ. ರಸ್ತೆಗೆ ಇಳಿದು ನೋಡಿ. ಒಂದು ಕಿಲೋಮೀಟರ್‌ ಆದರೂ ಓಡಾಡುವಷ್ಟು ಜಾಗ ಇದೆಯಾ? ಎಲ್ಲೆಂದರಲ್ಲಿ ಕಸ, ಫುಟ್‌ಪಾತ್‌ ಧ್ವಂಸ, ಅತಿಯಾದ ಬಿಸಿಲು. ಇವೆಲ್ಲವನ್ನೂ ನೀವು ಗಣನೆಗೆ ತೆಗೆದುಕೊಳ್ಳದೇ ಅಭಿಯಾನ ಆರಂಭಿಸಿದ್ದೀರಿ ಎಂದು ಗರಂ ಆಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !