October 16, 2026
Friday, October 16, 2026
spot_img

ನಾನು ಮಂತ್ರಿ ಆಗ್ತಿದಿನಿ, ರಾಹುಲ್‌ ಗಾಂಧಿ ಮಾತು ಕೊಟ್ಟಿದ್ದಾರೆ: ಯತೀಂದ್ರ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ರಚನೆಯಾಗುವ ಸಂಪುಟದಲ್ಲಿ ನನಗೆ ಸ್ಥಾನ ಸಿಕ್ಕೇ ಸಿಗುತ್ತದೆ. ರಾಹುಲ್‌ ಗಾಂಧಿ ಮಾತು ಕೊಟ್ಟಿದ್ದಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ನೂತನ ಸರ್ಕಾರದ ಸಚಿವ ಸಂಪುಟಕ್ಕೆ ಯಾರನ್ನೆಲ್ಲಾ ಸೇರಿಸಿಕೊಳ್ಳಬೇಕು ಎಂದು ಹೈಕಮಾಂಡ್‌ ನಿರ್ಧಾರ ಮಾಡುತ್ತಿದೆ. ನನಗೆ ಉಪಮುಖ್ಯಮಂತ್ರಿಯಾಗೋಕೆ ಇಷ್ಟವಿಲ್ಲ. ನಿರ್ದಿಷ್ಟ ಖಾತೆ ಕೊಡಿ ಅಂತನೂ ಕೇಳಿಲ್ಲ ಎಂದಿದ್ದಾರೆ.

ಕಳೆದ ಬಾರಿ ನಾನು ಹೈಕಮಾಂಡ್‌ ಭೇಟಿಯಾದಾಗ ರಾಹುಲ್‌ ಗಾಂಧಿ ಅವರು ನನ್ನನ್ನು ಸಂಪುಟಕ್ಕೆ ಸೇರಿಸಿಕೊಳ್ಳುತ್ತೀನಿ ಎಂದು ಮಾತು ಕೊಟ್ಟಿದ್ದಾರೆ. ಅವರು ಕೊಟ್ಟ ಮಾತಿಗೆ ತಪ್ಪೋರಲ್ಲ. ಯಾವ ಖಾತೆ ಆದ್ರೂ ಪರವಾಗಿಲ್ಲ ನಾನು ಖುಷಿಯಾಗಿ ಇರುತ್ತೇನೆ ಎಂದಿದ್ದಾರೆ.

Must Read