September 26, 2026
Saturday, September 26, 2026
spot_img

ಕೈದಿಗಳಿಬ್ಬರ ನಡುವೆ ಮಾರಾಮಾರಿ: ಓರ್ವನಿಗೆ ಚೂರಿ ಇರಿತ

ಹೊಸದಿಗಂತ ವರದಿ ಮಡಿಕೇರಿ:

ನಗರದ ಹೊರವಲಯದ ಕರ್ಣಂಗೇರಿಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳಿಬ್ಬರ ನಡುವೆ ನಡೆದ ಮಾರಾಮಾರಿ ಸಂದರ್ಭ ಓರ್ವ ಮತ್ತೊಬ್ಬನಿಗೆ ಚೂರಿಯಿಂದ ಇರಿದ ಪರಿಣಾಮ ಗಂಭೀರ ಗಾಯಗೊಂಡಿರುವ ಗಾಯಾಳುವನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಟಿ. ಶೆಟ್ಟಿಗೇರಿಯ ನಾಲ್ವರು ಸಿವಿಲ್ ಪ್ರಕರಣದಲ್ಲಿ ಬಂಧಿಗಳಾಗಿ ಕಾರಾಗೃಹದಲ್ಲಿದ್ದರು. ಈ ಪೈಕಿ ಅಡುಗೆ ಕೋಣೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಹೇಮಂತ್ ಹಾಗೂ ರಾಜೇಶ್ ಎಂಬವರುಗಳ ನಡುವೆ ಜಗಳವೇರ್ಪಟ್ಟು ಮಾರಾಮಾರಿ ನಡೆದಿದೆ. ಈ ಸಂದರ್ಭ ರಾಜೇಶ್ ಚೂರಿಯಿಂದ ಹೇಮಂತ್‌’ಗೆ ಇರಿದಿದ್ದಾನೆ.

ಇದನ್ನೂ ಓದಿ:

ಗಂಭೀರ ಗಾಯಗೊಂಡಿರುವ ಹೇಮಂತ್‌ನನ್ನು ಕಾರಾಗೃಹದ ಅಧಿಕಾರಿಗಳು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.

Must Read