June 2, 2026
Tuesday, June 2, 2026
spot_img

ಗಿಲ್‌ಗೆ ಸ್ಥಾನವಿಲ್ಲ, ಸಾಯಿ ಸುದರ್ಶನ್‌ಗೂ ನಿರಾಸೆ: ESPNcricinfo ಆಯ್ಕೆ ಮಾಡಿದ IPL ಬೆಸ್ಟ್ XI ಹೀಗಿದೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರ ಸೀಸನ್ ಮುಕ್ತಾಯವಾಗುತ್ತಿದ್ದಂತೆ ಟೂರ್ನಿಯ ಅತ್ಯುತ್ತಮ ಆಟಗಾರರ ಕುರಿತ ಚರ್ಚೆ ಜೋರಾಗಿದೆ. ಈ ನಡುವೆ ESPNcricinfo ತನ್ನ ‘ಟೀಮ್ ಆಫ್ ದಿ ಟೂರ್ನಮೆಂಟ್’ ಪ್ರಕಟಿಸಿದ್ದು, ಕೆಲ ಅಚ್ಚರಿಯ ಆಯ್ಕೆಗಳು ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿವೆ.

ವಿಶೇಷವಾಗಿ ಉತ್ತಮ ಪ್ರದರ್ಶನ ನೀಡಿದ್ದ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ತಂಡದಲ್ಲಿ ಸ್ಥಾನ ಪಡೆಯದಿರುವುದು ಚರ್ಚೆಗೆ ಕಾರಣವಾಗಿದೆ.

ಓಪನಿಂಗ್‌ನಲ್ಲಿ ಯುವ ಸಂಚಲನ-ಕಿಂಗ್ ಜೋಡಿ

ರಾಜಸ್ಥಾನ ರಾಯಲ್ಸ್ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ವೈಭವ್ ಸೂರ್ಯವಂಶಿ ಹಾಗೂ ಆರ್‌ಸಿಬಿಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಆರಂಭಿಕರಾಗಿ ಆಯ್ಕೆಯಾಗಿದ್ದಾರೆ. ಇಬ್ಬರೂ ಸೀಸನ್‌ ಪೂರ್ತಿ ಸ್ಥಿರ ಪ್ರದರ್ಶನ ನೀಡಿ ತಂಡಗಳ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಮಧ್ಯಮ ಕ್ರಮಾಂಕಕ್ಕೆ ಸ್ಟಾರ್ ಆಟಗಾರರ ಬೆಂಬಲ

ಮೂರನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಸ್ಥಾನ ಪಡೆದಿದ್ದಾರೆ. ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್‌ನ ಹೆನ್ರಿಚ್ ಕ್ಲಾಸೆನ್ ಮಧ್ಯಮ ಕ್ರಮಾಂಕವನ್ನು ಮತ್ತಷ್ಟು ಬಲಿಷ್ಠಗೊಳಿಸಿದ್ದಾರೆ.

ಇದನ್ನೂ ಓದಿ:

ಆಲ್ರೌಂಡರ್‌ಗಳ ದಂಡು

ನಿತೀಶ್ ಕುಮಾರ್ ರೆಡ್ಡಿ, ಕೃನಾಲ್ ಪಾಂಡ್ಯ ಮತ್ತು ಸುನಿಲ್ ನರೈನ್ ಆಲ್ರೌಂಡರ್ ವಿಭಾಗದಲ್ಲಿ ಸ್ಥಾನ ಪಡೆದಿದ್ದಾರೆ. ಬ್ಯಾಟ್ ಹಾಗೂ ಬಾಲ್ ಎರಡರಲ್ಲೂ ಇವರ ಕೊಡುಗೆ ಗಮನಾರ್ಹವಾಗಿತ್ತು.

ಬೌಲಿಂಗ್ ವಿಭಾಗದಲ್ಲಿ ಅನುಭವಿಗಳ ಮೇಲುಗೈ

ವೇಗಿ ಭುವನೇಶ್ವರ್ ಕುಮಾರ್, ಪರ್ಪಲ್ ಕ್ಯಾಪ್ ವಿಜೇತ ಕಗಿಸೋ ರಬಾಡ ಹಾಗೂ ಜೋಫ್ರಾ ಆರ್ಚರ್ ಬೌಲಿಂಗ್ ವಿಭಾಗವನ್ನು ಮುನ್ನಡೆಸಿದ್ದಾರೆ. ಇಂಪ್ಯಾಕ್ಟ್ ಪ್ಲೇಯರ್ ಆಗಿ ಯುವ ವೇಗಿ ಸಕೀಬ್ ಹೊಸೈನ್ ಆಯ್ಕೆಯಾಗಿದ್ದಾರೆ.

ESPNcricinfo ಆಯ್ಕೆ ಮಾಡಿದ ಬೆಸ್ಟ್ XI

ವೈಭವ್ ಸೂರ್ಯವಂಶಿ, ವಿರಾಟ್ ಕೊಹ್ಲಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ರಜತ್ ಪಾಟೀದಾರ್ (ನಾಯಕ), ಹೆನ್ರಿಚ್ ಕ್ಲಾಸೆನ್, ನಿತೀಶ್ ಕುಮಾರ್ ರೆಡ್ಡಿ, ಕೃನಾಲ್ ಪಾಂಡ್ಯ, ಸುನಿಲ್ ನರೈನ್, ಭುವನೇಶ್ವರ್ ಕುಮಾರ್, ಕಗಿಸೋ ರಬಾಡ, ಜೋಫ್ರಾ ಆರ್ಚರ್.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !