June 4, 2026
Thursday, June 4, 2026
spot_img

FOOD | ಹೊಟ್ಟೆಗೆ ಹಗುರ, ಜೀರ್ಣಕ್ರಿಯೆಗೆ ಸೂಪರ್: ರಾತ್ರಿ ತಡವಾಗಿ ಊಟ ಮಾಡುವವರಿಗೆ ಬೆಸ್ಟ್ ಪೆಪ್ಪರ್ ರೈಸ್!

ಪೆಪ್ಪರ್ ರೈಸ್ (ಕಾಳುಮೆಣಸಿನ ಅನ್ನ) ರಾತ್ರಿ ಊಟಕ್ಕೆ ಅತ್ಯಂತ ಹಗುರವಾದ, ರುಚಿಕರವಾದ ಮತ್ತು ಆರೋಗ್ಯಕರವಾದ ರೆಸಿಪಿಯಾಗಿದೆ. ವಿಶೇಷವಾಗಿ ನೆಗಡಿ, ಕೆಮ್ಮು, ಗಂಟಲು ನೋವು ಇದ್ದಾಗ ಅಥವಾ ಹವಾಮಾನ ತಂಪಾಗಿದ್ದಾಗ ಇದು ದೇಹಕ್ಕೆ ತಕ್ಷಣದ ಆರಾಮ ನೀಡುತ್ತದೆ.

ಬೇಕಾಗುವ ಸಾಮಗ್ರಿಗಳು
ಬೇಯಿಸಿದ ಅನ್ನ
ಕಾಳುಮೆಣಸು
ಜೀರಿಗೆ
ತುಪ್ಪ ಅಥವಾ ಎಣ್ಣೆ
ಸಾಸಿವೆ
ಉದ್ದಿನಬೇಳೆ ಹಾಗೂ ಕಡಲೆಬೇಳೆ
ಗೋಡಂಬಿ ಅಥವಾ ಶೇಂಗಾ ಬೀಜ
ಒಣಮೆಣಸಿನಕಾಯಿ
ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು
ಉಪ್ಪು

ಮಾಡುವ ವಿಧಾನ
ಮೊದಲು ಬಾಣಲೆಯಲ್ಲಿ ಜೀರಿಗೆ ಮತ್ತು ಕಾಳುಮೆಣಸನ್ನು ಯಾವುದೇ ಎಣ್ಣೆ ಹಾಕದೆ ಹುರಿದುಕೊಂಡು. ನಂತರ ಅದನ್ನು ಮಿಕ್ಸಿ ಅಥವಾ ಕುಟ್ಟಣಿಯಲ್ಲಿ ಹಾಕಿ ತರಿತರಿಯಾಗಿ ಪುಡಿ ಮಾಡಿ ಇಟ್ಟುಕೊಳ್ಳಬೇಕು. ಬಳಿಕ ಬಾಣಲೆಯಲ್ಲಿ 2 ಚಮಚ ತುಪ್ಪ ಬಿಸಿ ಮಾಡಿ. ಅದಕ್ಕೆ ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ, ಒಣಮೆಣಸಿನಕಾಯಿ, ಶೇಂಗಾ/ಗೋಡಂಬಿ ಮತ್ತು ಕರಿಬೇವು ಹಾಕಿ ಸಣ್ಣ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಹುರಿಯಬೇಕು. ನಂತರ ಒಗ್ಗರಣೆಗೆ ಬೇಯಿಸಿ ತಣ್ಣಗಾಗಿಸಿದ ಬಿಡಿಬಿಡಿಯಾದ ಅನ್ನ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಕೊನೆಯಲ್ಲಿ, ಸಿದ್ಧಪಡಿಸಿಟ್ಟುಕೊಂಡ ಜೀರಿಗೆ-ಪೆಪ್ಪರ್ ಪುಡಿಯನ್ನು ಅನ್ನದ ಮೇಲೆ ಉದುರಿಸಿ, ಕಡಿಮೆ ಉರಿಯಲ್ಲಿ 2 ನಿಮಿಷಗಳ ಕಾಲ ಹದವಾಗಿ ಕೈಯಾಡಿಸಬೇಕು. ಬಳಿಕ ಒಲೆಯಿಂದ ಕೆಳಗಿಳಿಸಿ, ಮೇಲೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ಘಮಘಮಿಸುವ, ಖಾರ-ಖಾರವಾದ ಪೆಪ್ಪರ್ ರೈಸ್ ಸಿದ್ಧವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !