ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 13’ ರ ಮೊದಲ ಅಧಿಕೃತ ಟೀಸರ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಸೀಸನ್ 12 ಭಾರಿ ಯಶಸ್ಸು ಕಂಡು ಕೆಲವು ತಿಂಗಳುಗಳಷ್ಟೇ ಆಗಿದ್ದರೂ, ಹೊಸ ಸೀಸನ್ನ ಟೀಸರ್ ಈಗಲೇ ಬಿಡುಗಡೆಯಾಗಿರುವುದು ದೊಡ್ಮನೆ ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸಿದೆ.
ಎಂದಿಗಿಂತಲೂ ಮುಂಚಿತವಾಗಿ ಆರಂಭ:
ಪ್ರತಿ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಆರಂಭವಾಗುತ್ತಿದ್ದ ಬಿಗ್ ಬಾಸ್, ಈ ಬಾರಿ ಎಂದಿಗಿಂತಲೂ ಮುಂಚಿತವಾಗಿ ಅಂದರೆ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಿನಲ್ಲೇ ಪ್ರಸಾರವಾಗಲಿದೆ ಎಂದು ವಾಹಿನಿ ಸುಳಿವು ನೀಡಿದೆ.
ಕಿಚ್ಚ ಸುದೀಪ್ ಅವರೇ ಸಾರಥಿ:
ಕಳೆದ ಸೀಸನ್ ಮುಕ್ತಾಯದ ವೇಳೆ ಶೋ ಮುನ್ನಡೆಸುವ ಕುರಿತು ಅನಿಶ್ಚಿತತೆ ಮೂಡಿಸಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಪ್ರೇಕ್ಷಕರ ಮತ್ತು ವಾಹಿನಿಯ ಭಾರಿ ಒತ್ತಾಯದ ಮೇರೆಗೆ 13ನೇ ಸೀಸನ್ ಅನ್ನು ಕೂಡ ತಾವೇ ನಿರೂಪಣೆ ಮಾಡಲಿದ್ದಾರೆ.
ವಿಶೇಷ ಥೀಮ್ ಮತ್ತು ಅಚ್ಚರಿಯ ಟ್ವಿಸ್ಟ್:
ಈ ಬಾರಿಯ ಸೀಸನ್ ಗಾಗಿ ಹೊಚ್ಚ ಹೊಸ ಥೀಮ್ ಒಂದನ್ನು ಸಿದ್ಧಪಡಿಸಲಾಗುತ್ತಿದ್ದು, ಇನ್ಸ್ಟಾಗ್ರಾಂ ರೀಲ್ಸ್ ಮತ್ತು ಯೂಟ್ಯೂಬ್ನ ಸೋಷಿಯಲ್ ಮೀಡಿಯಾ ಇನ್ಫ್ಲ್ಯೂಯೆನ್ಸರ್ಗಳು ಹಾಗೂ ಕಿರುತೆರೆಯ ಜನಪ್ರಿಯ ನಟರ ನಡುವೆ ಬಿಗ್ ಫೈಟ್ ಇರಲಿದೆ ಎಂದು ತಿಳಿದು ಬಂದಿದೆ.



