ಒಂದು ಕ್ಷಣ ಯೋಚಿಸಿ ನೋಡಿ… ಬೆಳಗ್ಗೆ ಕಣ್ಣು ತೆರೆದ ಕೂಡಲೇ ಫೋನ್ ಕೈಗೆ ಸಿಗದಿದ್ದರೆ ಏನಾಗುತ್ತದೆ? ಅಲಾರಂ ಇಲ್ಲ, ನೋಟಿಫಿಕೇಶನ್ ಇಲ್ಲ, ಮೆಸೇಜ್ ಇಲ್ಲ, ಸೋಶಿಯಲ್ ಮೀಡಿಯಾ ಇಲ್ಲ — ಇಡೀ ದಿನ ಸಂಪರ್ಕವೇ ಇಲ್ಲದ ಒಂದು ಪರಿಸ್ಥಿತಿ. ಇಂದಿನ ಜೀವನದಲ್ಲಿ ಇದು ಸ್ವಲ್ಪ ವಿಚಿತ್ರ ಅನ್ನಿಸಿದರೂ, ಇದು ನಿಜವಾದ “ಡಿಜಿಟಲ್ ವಿರಾಮ”ದ ಅನುಭವವಾಗಬಹುದು.
ಮೊದಲಿಗೆ ಬಹಳ ಜನರಿಗೆ ಅಸಹಜವಾಗಿ ಅನಿಸುತ್ತದೆ. ಏನೋ ಕಳೆದುಕೊಂಡಂತೆ, ಏನೋ miss ಆಗ್ತಿದೆ ಅನ್ನೋ ಭಾವನೆ ಬರುತ್ತದೆ. ತಕ್ಷಣ ಫೋನ್ ಹುಡುಕೋ ಮನಸ್ಸು ಆಗುತ್ತದೆ. ಯಾಕೆಂದರೆ ನಾವು ಅಷ್ಟು ಮಟ್ಟಿಗೆ ಫೋನ್ ಮೇಲೆ ಅವಲಂಬಿತರಾಗಿದ್ದೇವೆ ಅನ್ನೋದು ಅಲ್ಲಿ ಗೊತ್ತಾಗುತ್ತದೆ.
ಆದರೆ ಸ್ವಲ್ಪ ಸಮಯದ ನಂತರ ಒಂದು ವಿಚಿತ್ರ ಬದಲಾವಣೆ ಕಾಣಿಸುತ್ತದೆ. ಸುತ್ತಮುತ್ತಲಿನ ಶಬ್ದಗಳು ಸ್ಪಷ್ಟವಾಗಿ ಕೇಳಿಸುತ್ತವೆ, ಮನಸ್ಸು ನಿಧಾನವಾಗುತ್ತದೆ, ದಿನದ ವೇಗ ಸ್ವಲ್ಪ ಕಡಿಮೆಯಾಗುತ್ತದೆ. ಯಾವಾಗಲೂ ಬರುವ notification ಇಲ್ಲದ ಕಾರಣ, ಗಮನ ಬೇರೆ ಕಡೆ ಸರಿಯುತ್ತದೆ ಪುಸ್ತಕ, ಮನೆ ಕೆಲಸ, ಅಥವಾ ನಮ್ಮದೇ ಆಲೋಚನೆಗಳ ಕಡೆ.
ಇದನ್ನೂ ಓದಿ:
ಈ ದಿನದಲ್ಲಿ ನಾವು ಒಂದು ವಿಷಯವನ್ನು ಹೆಚ್ಚು ಸ್ಪಷ್ಟವಾಗಿ ಅರಿಯಬಹುದು ನಾವು ಎಷ್ಟು ಬಾರಿ ಫೋನ್ ನೋಡುತ್ತೇವೆ ಅನ್ನೋದು. ಕೆಲವೊಮ್ಮೆ ಫೋನ್ ಅಗತ್ಯಕ್ಕಿಂತ ಹೆಚ್ಚು ನಮ್ಮ ಗಮನವನ್ನು ಹಿಡಿದುಕೊಂಡಿದೆ ಅನ್ನೋದು ತಿಳಿಯುತ್ತದೆ.
ಫೋನ್ ಇಲ್ಲದ ಒಂದು ದಿನ ಅಂದರೆ ಸಂಪರ್ಕ ಕಡಿತವಲ್ಲ… ಅದು ಸ್ವಲ್ಪ ಸಮಯ ನಮ್ಮನ್ನು ನಾವು ಮತ್ತೆ ಭೇಟಿಯಾಗೋ ಅವಕಾಶ. ನಾವು ಏನು ಯೋಚಿಸುತ್ತೇವೆ, ಏನು ಮಾಡುತ್ತೇವೆ, ಏನು ಬೇಕು ಅನ್ನೋದು ಸ್ವಲ್ಪ ಸ್ಪಷ್ಟವಾಗಿ ಕಾಣಿಸಬಹುದು.



