November 17, 2026
Tuesday, November 17, 2026
spot_img

ಶಾರ್ಟ್ ಸರ್ಕ್ಯೂಟ್‌ನಿಂದ ಬೊಲೆರೋ ಪಿಕಪ್‌ಗೆ ಬೆಂಕಿ: ಕ್ಷಣಾರ್ಧದಲ್ಲಿ ಹೊತ್ತಿ ಉರಿದ ವಾಹನ

ಹೊಸದಿಗಂತ ವರದಿ ಯಲ್ಲಾಪುರ:

ಯಲ್ಲಾಪುರ ತಾಲೂಕಿನ ಹೊಸಮನೆ, ಬಿಸ್ಗೋಡ ಗ್ರಾಮದ ಬಳಿ ಸಾಗುತ್ತಿದ್ದ ಬೊಲೆರೋ ಪಿಕಪ್ ವಾಹನವೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ, ವಾಹನ ಹಾಗೂ ಅದರಲ್ಲಿದ್ದ ಹುಲ್ಲು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿರುವ ಘಟನೆ ನಡೆದಿದೆ.

ಕಲಘಟಗಿ ತಾಲೂಕಿನ ತಂಬೂರು ಗ್ರಾಮದ ಚನ್ನಬಸಯ್ಯ ಎಂಬುವರಿಗೆ ಸೇರಿದ ಬೊಲೆರೋ ಪಿಕಪ್ ವಾಹನದಲ್ಲಿ 65 ಪಿಂಡಿ ಹುಲ್ಲನ್ನು ತುಂಬಿಕೊಂಡು ಸಾಗಿಸಲಾಗುತ್ತಿತ್ತು. ಈ ವೇಳೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ವಾಹನಕ್ಕೆ ಬೆಂಕಿ ತಗುಲಿದೆ.

ವಿಷಯ ತಿಳಿದ ತಕ್ಷಣವೇ ಎಚ್ಚೆತ್ತ ಯಲ್ಲಾಪುರ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ, ವಾಹನದ ಮೇಲೆ ನೀರು ಹಾಯಿಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದರು. ಕಾರ್ಯಾಚರಣೆಯಲ್ಲಿ ಲೀಡಿಂಗ್ ಫೈರ್ ಫೈಟರ್ ಮಾರುತಿ ನಾಯ್ಕ್, ಡ್ರೈವರ್ ವಾಸೀಂ, ಕಾರ್ತಿಕ್ ಹಾಗೂ ಫೈರ್ ಫೈಟರ್ ಮಂಜುನಾಥ್ ಇದ್ದರು.

Must Read