August 28, 2026
Friday, August 28, 2026
spot_img

ಟ್ರೆಕ್ಕಿಂಗ್‌ ವೇಳೆ ಕಳೆದುಹೋದ ಎಂಬಿಎ ವಿದ್ಯಾರ್ಥಿನಿ, ವಾರವಾದ್ರೂ ಸಿಕ್ಕದ ಸುಳಿವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉತ್ತರಾಖಂಡ ಉತ್ತರಕಾಶಿಯ ದಯಾರ ಬುಗ್ಯಾಲ್‌ನಲ್ಲಿ ಟ್ರೆಕ್ಕಿಂಗ್‌ ಮಾಡುವ ವೇಳೆ ಎಂಬಿಎ ವಿದ್ಯಾರ್ಥಿನಿಯೊಬ್ಬರು ಕಾಣೆಯಾಗಿದ್ದಾರೆ. ಕಾಣೆಯಾಗಿ ಒಂದು ವಾರ ಕಳೆದರೂ ಯಾವುದೇ ಸುಳಿವು ಸಿಗದೇ ಪೋಷಕರು ಕಂಗಾಲಾಗಿದ್ದಾರೆ.

ನೈನಿತಾಲ್‌ ನಿವಾಸಿ ಬಬಿತಾ ಪಾಂಡೆ ತನ್ನ ಸ್ನೇಹಿತೆಯರಾದ ಹರ್ಮನ್‌ಪ್ರೀತ್‌ ಸಿಂಗ್‌ ಹಾಗೂ ಹರ್ಮನ್‌ಪಾಲ್‌ ಸಿಂಗ್‌ ಜೊತೆ ಟ್ರೆಕ್ಕಿಂಗ್‌ಗೆ ತೆರಳಿದ್ದಾರೆ. ಈ ವೇಳೆ ಸ್ನೇಹಿತರೆಯರಿಂದ ಬೇರ್ಪಟ್ಟ ಬಬಿತಾ ಎಷ್ಟು ಸಮಯವಾದರೂ ಸಿಕ್ಕಿಲ್ಲ.

ಮನೆಗೆ ಬಂದ ಸ್ನೇಹಿತೆಯರು ಬಬಿತಾ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಪೋಷಕರು ದೂರು ನೀಡಿದ್ದು, ಇಬ್ಬರು ಯುವತಿಯರನ್ನು ವಿಚಾರಣೆ ನಡೆಸಲಾಗುತ್ತಿದೆ. ಮೂವರು ಸ್ನೇಹಿತೆಯರು ಬೆಳಗ್ಗೆ ಟ್ರೆಕ್ಕಿಂಗ್‌ ಆರಂಭಿಸಿದ್ದರು. ಮಧ್ಯರಾತ್ರಿ ಬಬಿತಾ ಟೆಂಟ್‌ನಿಂದ ಕಾಣೆಯಾಗಿದ್ದಾರೆ. ಅವರ ಹುಡುಕಾಟಕ್ಕಾಗಿ ಸೇನೆ, ಇಂಡೋ-ಟಿಬೆಟಿಯನ್ ಗಡಿ ಪೊಲೀಸ್, ರಾಜ್ಯ ವಿಪತ್ತು ರಕ್ಷಣಾ ಪಡೆ, ರಾಷ್ಟ್ರೀಯ ವಿಪತ್ತು ರಕ್ಷಣಾ ಪಡೆ, ಪೊಲೀಸರು, ಅರಣ್ಯ ಇಲಾಖೆ ಮತ್ತು ವಿಪತ್ತು ನಿರ್ವಹಣೆಯ ಸಿಬ್ಬಂದಿಯನ್ನು ಒಳಗೊಂಡ 150 ಸದಸ್ಯರ ತಂಡ ಶೋಧ ಕಾರ್ಯಾಚರಣೆ ನಡೆಸುತ್ತಿದೆ.

ದಟ್ಟವಾದ ಅರಣ್ಯ, ಚಾರಣ ಮಾರ್ಗಗಳು ಮತ್ತು ಗುಹೆಗಳ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸ್ನಿಫರ್ ನಾಯಿಗಳು ಮತ್ತು ಡ್ರೋನ್ ಬಳಸಿ ಹುಡುಕಾಟ ನಡೆಸಲಾಗುತ್ತಿದೆ. ಅಲ್ಲದೇ ಆರು ಸದಸ್ಯರ ಡೈವಿಂಗ್ ತಂಡವು ಗೋಯಿ ಶಿಬಿರದ ಬಳಿಯ ಸರೋವರವನ್ನು ಸಹ ಹುಡುಕುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !