September 26, 2026
Saturday, September 26, 2026
spot_img

ಚಾರ್‌ಧಾಮ್‌ ಯಾತ್ರೆಗೆ ಜನವೋ ಜನ! ದೀರ್ಘ ಸರತಿ ಸಾಲಿಗೆ ಎಲ್ಲರೂ ತಯಾರಾಗಿ ಬನ್ನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಾಮಾಜಿಕ ಜಾಲತಾಣಗಳು ಬಂದ ನಂತರ ಯಾವ ಸ್ಥಳದಲ್ಲಿ ನೋಡಿದರೂ ಜನ ಅಧಿಕವಾಗಿ ಕಾಣಿಸುತ್ತಾರೆ. ಇದೀಗ ಚಾರ್‌ಧಾಮ್‌ ಯಾತ್ರೆಗೂ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಸುದೀರ್ಘ ಲೈನ್‌ಗಳಿಗೆ ತಯಾರಾಗಿ ಬನ್ನಿ ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ.

ಜನರು ಎಷ್ಟೇ ತಯಾರಾಗಿ ಬಂದರೂ ಇಲ್ಲಿಗೆ ಬಂದ ಮೇಲೆ ಪರಿಸ್ಥಿತಿ ಬದಲಾಗುತ್ತದೆ. ವಸತಿ ಬುಕ್ಕಿಂಗ್‌, ದೀರ್ಘ ಸಾಲುಗಳಲ್ಲಿ ನಿಲ್ಲಲು ತಯಾರಾಗಿಯೇ ಬನ್ನಿ. ಇನ್ನು ಮಳೆಗಾಲ ಸಮೀಪಿಸುತ್ತಿದೆ. ಬೆಚ್ಚನೆಯ ಬಟ್ಟೆ, ರೈನ್‌ಕೋಟ್‌, ನೋಂದಣಿ ಎಲ್ಲವನ್ನೂ ತಯಾರು ಮಾಡಿಕೊಂಡು ಬನ್ನಿ ಎಂದಿದೆ.

ಇಲ್ಲಿ ಸ್ವಲ್ಪವೂ ಬಿಸಿಲು ಇಲ್ಲ. ಶೀತದ ವಾತಾವರಣಕ್ಕೆ, ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ವಸ್ತುಗಳನ್ನು ಮಿಸ್‌ ಮಾಡದೇ ಇಟ್ಟುಕೊಳ್ಳಿ. ಮಾನ್ಸೂನ್ ಋತು ಕ್ರಮೇಣ ಸಮೀಪಿಸುತ್ತಿದೆ. ಪ್ರವಾಸಿಗರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಾಣಲಿದೆ. ಜೋಶಿಮಠದಲ್ಲಿ ಏಕಮುಖ ಸಂಚಾರ ವ್ಯವಸ್ಥೆಯನ್ನು ಜಾರಿಗೆ ತಂದಿರುವುದರಿಂದ, ಪ್ರಯಾಣ ಕೈಗೊಳ್ಳುವ ಮೊದಲು ಭಕ್ತರು ತಮ್ಮ ನೋಂದಣಿಯನ್ನು ಪೂರ್ಣಗೊಳಿಸಬೇಕೆಂದು ಒತ್ತಾಯಿಸುತ್ತೇವೆ. ನೋಂದಣಿ ಮಾಡುವುದರಿಂದ ನಿಮ್ಮ ಭೇಟಿಯ ದಾಖಲೆ ನಮ್ಮಲ್ಲಿ ಇರಲಿದೆ. ಇದು ನಮ್ಮ ಕಾರ್ಯಾಚರಣೆಗಳಿಗೆ ಅತ್ಯಗತ್ಯ. ಇಲ್ಲಿ ಹವಾಮಾನವು ತಂಪಾಗಿರುವುದರಿಂದ, ದಯವಿಟ್ಟು ಸಾಕಷ್ಟು ಬೆಚ್ಚಗಿನ ಬಟ್ಟೆಗಳನ್ನು ತರಲು ಮರೆಯಬೇಡಿ ಎಂದು ಮನವಿ ಮಾಡಿದ್ದಾರೆ.

Must Read