ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ಆಭರಣ ಪ್ರಿಯರಿಗೆ ಹಾಗೂ ಹೂಡಿಕೆದಾರರಿಗೆ ಸಮಾಧಾನಕರ ಸುದ್ದಿಯೊಂದಿದೆ. ಕಳೆದ ಕೆಲವು ದಿನಗಳಿಂದ ಗಗನಕ್ಕೇರುತ್ತಿದ್ದ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಇದೀಗ ಸತತ ಇಳಿಕೆ ಕಂಡುಬರುತ್ತಿದೆ. ನಿನ್ನೆ ಗುರುವಾರ ಅಲ್ಪ ಪ್ರಮಾಣದಲ್ಲಿ ತಗ್ಗಿದ್ದ ಹಳದಿ ಲೋಹದ ಬೆಲೆ, ಇಂದು ಶುಕ್ರವಾರವೂ ಮತ್ತಷ್ಟು ಕುಸಿತ ಕಂಡಿದೆ.
ಎರಡು ದಿನದಲ್ಲಿ ಚಿನ್ನದ ಬೆಲೆ ಎಷ್ಟು ಕಡಿಮೆಯಾಗಿದೆ?
ಭಾರತೀಯ ಮಾರುಕಟ್ಟೆಯಲ್ಲಿ ನಿನ್ನೆ (ಗುರುವಾರ) ಪ್ರತಿ ಗ್ರಾಮ್ ಆಭರಣ ಚಿನ್ನದ ಬೆಲೆಯಲ್ಲಿ 10 ರೂಪಾಯಿ ಇಳಿಕೆಯಾಗಿತ್ತು. ಇಂದು ಶುಕ್ರವಾರದ ವಹಿವಾಟಿನಲ್ಲಿ ಮತ್ತೆ 35 ರೂಪಾಯಿಗಳಷ್ಟು ದರ ತಗ್ಗಿದೆ. ಇದರೊಂದಿಗೆ ಕೇವಲ ಎರಡೇ ದಿನಗಳಲ್ಲಿ ಪ್ರತಿ ಗ್ರಾಮ್ ಚಿನ್ನದ ಬೆಲೆಯಲ್ಲಿ ಒಟ್ಟು 45 ರೂಪಾಯಿಗಳಷ್ಟು ಕಡಿತವಾದಂತಾಗಿದೆ. ಭಾರತದಲ್ಲಿ ಬೆಲೆ ಇಳಿಕೆಯಾಗುತ್ತಿದ್ದರೆ, ಜಾಗತಿಕ ಮಾರುಕಟ್ಟೆಯ ವಿದೇಶಿ ಹಲವು ದೇಶಗಳಲ್ಲಿ ಬಂಗಾರದ ಬೆಲೆಯಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡುಬಂದಿರುವುದು ವಿಶೇಷ.
22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಇಂದಿನ ದರ ವಿವರ:
ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ದರ ಸ್ಥಿರತೆಯತ್ತ ಸಾಗುತ್ತಿದ್ದು, ಇಂದಿನ ಲೇಟೆಸ್ಟ್ ದರ ಪಟ್ಟಿ ಈ ಕೆಳಗಿನಂತಿದೆ:
22 ಕ್ಯಾರೆಟ್ ಚಿನ್ನ (ಆಭರಣ ಚಿನ್ನ): 10 ಗ್ರಾಮ್‌ಗೆ 1,42,750 ರೂಪಾಯಿ ತಲುಪಿದೆ.
24 ಕ್ಯಾರೆಟ್ ಚಿನ್ನ (ಅಪರಂಜಿ ಚಿನ್ನ): 10 ಗ್ರಾಮ್‌ಗೆ 1,55,730 ರೂಪಾಯಿ ಆಗಿದೆ.



