June 5, 2026
Friday, June 5, 2026
spot_img

ವಾರಿಯರ್ಸ್‌ ವಾರ್ ಶುರು: ಪಡಿಕ್ಕಲ್‌, ವೈಶಾಕ್‌ ಗೆ ಮಣೆ ಹಾಕಿದ ಮೈಸೂರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿರುವ ಮಹಾರಾಜ ಟಿ20 ಟ್ರೋಫಿಯ ಐದನೇ ಆವೃತ್ತಿಗೆ ವೇದಿಕೆ ಸಜ್ಜಾಗಿದೆ.

ಜೂನ್ 20ರಿಂದ ಆರಂಭವಾಗಲಿರುವ ಈ ಟೂರ್ನಿಯು ಜುಲೈ 12ರವರೆಗೆ ನಡೆಯಲಿದ್ದು, ಅದರ ಅಂಗವಾಗಿ ನಡೆದ ಆಟಗಾರರ ಹರಾಜು ಸಾಕಷ್ಟು ಕುತೂಹಲಕ್ಕೆ ಕಾರಣವಾಯಿತು. ರಾಜ್ಯದ ಪ್ರಮುಖ ಕ್ರಿಕೆಟಿಗರು ವಿವಿಧ ಫ್ರಾಂಚೈಸಿಗಳ ಗಮನ ಸೆಳೆದಿದ್ದು, ಕೆಲವು ಆಟಗಾರರು ಭಾರೀ ಮೊತ್ತಕ್ಕೆ ತಂಡಗಳ ಪಾಲಾಗಿದ್ದಾರೆ.

ಹರಾಜಿನಲ್ಲಿ ಅದೃಷ್ಟ ಪರೀಕ್ಷೆ

150ಕ್ಕೂ ಹೆಚ್ಚು ಆಟಗಾರರು ಹರಾಜಿನ ಅಖಾಡಕ್ಕಿಳಿದಿದ್ದು, ಆರು ತಂಡಗಳು ತಲಾ 60 ಲಕ್ಷ ರೂಪಾಯಿ ಪರ್ಸ್ ಮೊತ್ತದೊಂದಿಗೆ ಆಟಗಾರರ ಖರೀದಿಯಲ್ಲಿ ಭಾಗವಹಿಸಿದ್ದವು. ಹಲವು ಯುವ ಪ್ರತಿಭೆಗಳ ಜೊತೆಗೆ ಅನುಭವಿ ಆಟಗಾರರಿಗೂ ಉತ್ತಮ ಬೇಡಿಕೆ ಕಂಡುಬಂದಿತು.

ಪಡಿಕ್ಕಲ್‌ಗೆ ಮೈಸೂರಿನ ಮಣೆ

ಇತ್ತೀಚಿನ ಐಪಿಎಲ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಕರ್ನಾಟಕದ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ ಅವರನ್ನು ಮೈಸೂರು ವಾರಿಯರ್ಸ್ ಫ್ರಾಂಚೈಸಿ 2.60 ಲಕ್ಷ ರೂಪಾಯಿಗೆ ತನ್ನ ತಂಡಕ್ಕೆ ಸೇರ್ಪಡೆಗೊಳಿಸಿದೆ. ಟೂರ್ನಿಯಲ್ಲಿ ಅವರ ಮೇಲೆ ದೊಡ್ಡ ನಿರೀಕ್ಷೆ ಇಡಲಾಗಿದೆ.

ಇದನ್ನೂ ಓದಿ:

ವೈಶಾಕ್‌ಗೆ ಭಾರೀ ಮೊತ್ತ

ವೇಗಿ ವೈಶಾಕ್ ವಿಜಯ್‌ಕುಮಾರ್ ಹರಾಜಿನ ಪ್ರಮುಖ ಆಕರ್ಷಣೆಯಾಗಿದ್ದರು. ಅವರನ್ನು ಮೈಸೂರು ವಾರಿಯರ್ಸ್ 8.25 ಲಕ್ಷ ರೂಪಾಯಿಗೆ ಖರೀದಿಸಿದ್ದು, ತಂಡದ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ.

ಪ್ರಸಿದ್ಧ ಕೃಷ್ಣಗೂ ಅವಕಾಶ

ಭಾರತ ತಂಡದ ವೇಗಿ ಪ್ರಸಿದ್ಧ ಕೃಷ್ಣ ಕೂಡ ಮೈಸೂರು ವಾರಿಯರ್ಸ್ ತಂಡದ ಪಾಲಾಗಿದ್ದು, 2.60 ಲಕ್ಷ ರೂಪಾಯಿಗೆ ಒಪ್ಪಂದಗೊಂಡಿದ್ದಾರೆ. ಅವರ ಅನುಭವ ತಂಡಕ್ಕೆ ಬಲ ತುಂಬುವ ನಿರೀಕ್ಷೆಯಿದೆ.

ಬಾಂಡಗೆ ಮತ್ತು ಚೇತನ್ ಮೇಲೂ ಭರವಸೆ

ಮಾಜಿ ಆರ್‌ಸಿಬಿ ಆಟಗಾರ ಮನೋಬ್ ಬಾಂಡಗೆ ಅವರನ್ನು 10 ಲಕ್ಷ ರೂಪಾಯಿಗೆ ಖರೀದಿಸಲಾಗಿದೆ. ಮತ್ತೊಂದೆಡೆ ಸ್ಫೋಟಕ ಬ್ಯಾಟರ್ ಚೇತನ್ ಎಲ್.ಆರ್. 11.50 ಲಕ್ಷ ರೂಪಾಯಿ ಪಡೆದು ಮೈಸೂರು ತಂಡದ ಪ್ರಮುಖ ಆಯ್ಕೆಯಾಗಿದ್ದಾರೆ. ಈ ಖರೀದಿಗಳೊಂದಿಗೆ ಮೈಸೂರು ವಾರಿಯರ್ಸ್ ಸಮತೋಲನಯುತ ಹಾಗೂ ಬಲಿಷ್ಠ ತಂಡವನ್ನು ಕಟ್ಟುವಲ್ಲಿ ಯಶಸ್ವಿಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !