June 6, 2026
Saturday, June 6, 2026
spot_img

SNACKS | ಮಳೆಗಾಲದ ಸಂಜೆಗೆ ಮಸ್ತ್ ಕಾಂಬಿನೇಷನ್: ಗರಿಗರಿಯಾದ ಸಾಂಪ್ರದಾಯಿಕ ಹೆಸರುಕಾಳಿನ ವಡೆ ರೆಸಿಪಿ!

ಮಳೆಗಾಲದ ತಂಪಾದ ಸಂಜೆಯ ಮುಸ್ಸಂಜೆಯಲ್ಲಿ ಬಿಸಿಬಿಸಿ ಚಹಾ ಅಥವಾ ಫಿಲ್ಟರ್ ಕಾಫಿ ಕುಡಿಯುತ್ತಾ, ಕುರುಕುಲಾದ ಏನಾದರೂ ತಿನ್ನಬೇಕು ಅನ್ನಿಸುವುದು ಪ್ರತಿಯೊಬ್ಬರ ಸಹಜ ಸ್ವಭಾವ. ಇಂತಹ ಸಮಯದಲ್ಲಿ ದಿನಾಲೂ ಮಾಡುವ ಆಲೂಗಡ್ಡೆ ಬಜ್ಜಿ ಅಥವಾ ಈರುಳ್ಳಿ ಪಕೋಡ ತಿಂದು ಬೇಸರವಾಗಿದ್ದರೆ, ಈ ಬಾರಿ ಅತ್ಯಂತ ಪೌಷ್ಟಿಕಾಂಶಯುಕ್ತ ಹಾಗೂ ಗರಿಗರಿಯಾದ ಉತ್ತರ ಕರ್ನಾಟಕ ಶೈಲಿಯ ಹೆಸರುಕಾಳಿನ ವಡೆ ಅನ್ನು ಒಮ್ಮೆ ಮಾಡಿ.

ಬೇಕಾಗುವ ಸಾಮಗ್ರಿಗಳು
ಹೆಸರುಕಾಳು
ಈರುಳ್ಳಿ
ಹಸಿ ಮೆಣಸಿನಕಾಯಿ
ಶುಂಠಿ
ಸಬ್ಬಸಿಗೆ ಸೊಪ್ಪು
ಕೊತ್ತಂಬರಿ ಸೊಪ್ಪು
ಕರಿಬೇವು
ಜೀರಿಗೆ
ಧನಿಯಾ ಬೀಜ
ಇಂಗು
ಉಪ್ಪು
ಎಣ್ಣೆ

ಮಾಡುವ ವಿಧಾನ
ಮೊದಲು ನೆನೆಸಿದ ಹೆಸರುಕಾಳಿನಿಂದ ನೀರನ್ನು ಸಂಪೂರ್ಣವಾಗಿ ಬಸಿದು, 10 ನಿಮಿಷ ಒಂದು ಜರಡಿಯಲ್ಲಿ ಅಥವಾ ಕಾಟನ್ ಬಟ್ಟೆಯ ಮೇಲೆ ಹಾಕಿ ಒಣಗಲು ಬಿಡಬೇಕು. ನಂತರ ರುಬ್ಬುವ ಮುನ್ನ ಒಣಗಿದ ಕಾಳಿನಿಂದ 2 ದೊಡ್ಡ ಚಮಚ ಹೆಸರುಕಾಳನ್ನು ಪ್ರತ್ಯೇಕವಾಗಿ ಎತ್ತಿಟ್ಟುಕೊಂಡು, ಉಳಿದ ಹೆಸರುಕಾಳಿಗೆ ಹಸಿ ಮೆಣಸಿನಕಾಯಿ, ಶುಂಠಿ ಮತ್ತು ಜೀರಿಗೆ ಸೇರಿಸಿ ಮಿಕ್ಸಿ ಜಾರ್‌ನಲ್ಲಿ ನೀರು ಹಾಕದೆ ತರಿತರಿಯಾಗಿ ರುಬ್ಬಿಕೊಳ್ಳಬೇಕು. ಒಂದೆರಡು ಸುತ್ತು ತಿರುಗಿಸಿದರೆ ಸಾಕು, ನುಣ್ಣಗೆ ಮಾಡಬಾರದು.

ನಂತರ ರುಬ್ಬಿದ ಹಿಟ್ಟನ್ನು ಒಂದು ಬೌಲ್‌ಗೆ ಹಾಕಿ. ಅದಕ್ಕೆ ಮೊದಲೇ ಎತ್ತಿಟ್ಟ ಇಡೀ ಹೆಸರುಕಾಳು, ಹೆಚ್ಚಿದ ಈರುಳ್ಳಿ, ಸಬ್ಬಸಿಗೆ ಸೊಪ್ಪು, ಕೊತ್ತಂಬರಿ ಸೊಪ್ಪು, ಕರಿಬೇವು, ಜಜ್ಜಿದ ಧನಿಯಾ ಬೀಜ, ಇಂಗು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕೈಯಿಂದ ಮಿಕ್ಸ್ ಮಾಡಿ. ಹಿಟ್ಟಿನಿಂದ ಸಣ್ಣ ನಿಂಬೆಹಣ್ಣಿನ ಗಾತ್ರದ ಉಂಡೆಗಳನ್ನು ಮಾಡಿ, ಅಂಗೈಯಲ್ಲಿ ಲಘುವಾಗಿ ಒತ್ತಿ ವಡೆಯ ಆಕಾರಕ್ಕೆ ತಟ್ಟಬೇಕು. ಬಾಂಡ್ಲಿಯಲ್ಲಿ ಎಣ್ಣೆ ಕಾಯಿಸಿ. ಎಣ್ಣೆ ಚೆನ್ನಾಗಿ ಕಾದ ನಂತರ ಉರಿಯನ್ನು ಮಧ್ಯಮಕ್ಕೆ ಇಟ್ಟು, ತಟ್ಟಿದ ವಡೆಗಳನ್ನು ನಿಧಾನವಾಗಿ ಎಣ್ಣೆಗೆ ಬಿಡಬೇಕು. ವಡೆಗಳನ್ನು ಎರಡೂ ಕಡೆ ಹೊಂಬಣ್ಣ ಬಂದು ಗರಿಗರಿಯಾಗುವವರೆಗೆ ಚೆನ್ನಾಗಿ ಕರಿದರೆ. ಈಗ ಬಿಸಿಬಿಸಿ ಹೆಸರುಕಾಳಿನ ವಡೆ ಸಿದ್ಧವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !