July 23, 2026
Thursday, July 23, 2026
spot_img

ನಂಗೆ ವಿರಾಟ್‌ ಭಯ್ಯಾ ಫೇವರೆಟ್‌, ನಾನು ಆರ್‌ಸಿಬಿ ಕಟ್ಟಾ ಅಭಿಮಾನಿ ಎಂದ ಸೂರ್ಯವಂಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಐಪಿಎಲ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ಟೀಂನಿಂದ ಅದ್ಭುತ ಪ್ರದರ್ಶನ ನೀಡುತ್ತಿರುವ ವೈಭವ್‌ ಸೂರ್ಯವಂಶಿಗೆ ಆರ್‌ಸಿಬಿ ಟೀಂ ಅಂದ್ರೆ ತುಂಬಾ ಇಷ್ಟವಂತೆ. ಆರ್‌ಸಿಬಿ ಟೀಂನ್ನು ಇಷ್ಟಪಡೋಕೆ ವಿರಾಟ್‌ ಕೊಹ್ಲಿ ಕಾರಣ ಎಂದು ವೈಭವ್‌ ಹೇಳಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ್ದು, ನಾನು ಮೊದಲಿನಿಂದಲೂ ಆರ್‌ಸಿಬಿ ತಂಡದ ದೊಡ್ಡ ಅಭಿಮಾನಿ, ಇದಕ್ಕೆಲ್ಲಾ ಕಾರಣ ವಿರಾಟ್‌ ಕೊಹ್ಲಿ ಭೈಯ್ಯಾ, ಅವರ ಜೊತೆ ಮಾತನಾಡಬೇಕು ಅಂತ ಯಾವಾಗಲೂ ಆಸೆ ಆಗುತ್ತದೆ. ಪಂದ್ಯವೊಂದು ಮುಗಿದ ಬಳಿಕ ಕೊಹ್ಲಿ ಭಯ್ಯಾ ಬಂದು ನನ್ನ ಹೆಗಲ ಮೇಲೆ ಕೈ ಹಾಕಿ ಮಾತನಾಡಿಸಿದ್ರು.

ಒಬ್ಬ ಸೂಪರ್‌ ಸ್ಟಾರ್‌ ಜೊತೆ ಮಾತನಾಡ್ತಿದ್ದೀನಿ ಅನಿಸಲೇ ಇಲ್ಲ. ಅವರು ನನ್ನ ಅಣ್ಣನಂತೆ, ಪ್ರೀತಿಯಿಂದ ಮಾರ್ಗದರ್ಶನ ನೀಡಿದ್ದಾರೆ. ಟೂರ್ನಿ ಆರಂಭದ ಪಂದ್ಯವೊಂದರಲ್ಲಿ ಆರ್‌ಸಿಬಿ ವಿರುದ್ಧ ಅಬ್ಬರದ ಬ್ಯಾಟಿಂಗ್‌ ಮಾಡಿದಾಗ ಕೊಹ್ಲಿ ಭಯ್ಯಾ ಅವರ ಆಟೋಗ್ರಾಫ್‌ ಇರುವ ಕ್ಯಾಪ್‌ನ್ನು ಗಿಫ್ಟ್‌ ಆಗಿ ನೀಡಿದ್ದರು. ಕೊಹ್ಲಿ ಭಯ್ಯಾ ಕೊಟ್ಟಿದ್ದ ಕ್ಯಾಪ್‌ನ್ನು ಸದಾ ಹಾಕಿಕೊಂಡು ಓಡಾಡಿದ್ದೇನೆ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !