ಹೊಸದಿಗಂತ ವರದಿ ಹುಬ್ಬಳ್ಳಿ:
ಮಗನಿಗೆ ತಂದೆ ಬೈದು ಬುದ್ದಿ ಹೇಳಿದ ಕಾರಣ ಬಡಿಗೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ಭಾನುವಾರ ತಡರಾತ್ರಿ ಗೋಪನಕೊಪ್ಪದ ಸಿದ್ದೇಶ್ವರ ಕಾಲೋನಿಯಲ್ಲಿ ನಡೆದಿದೆ.
ತಂದೆ ಕಲ್ಲಪ್ಪ ಮೂಲಿಮನಿ(೫೦) ಮೃತಪಟ್ಟಿರುವ ವ್ಯಕ್ತಿ.
ಮಗನಾದ ಮಹೇಶ ಕೊಲೆ ಮಾಡಿದ್ದಾರೆ. ತಂದೆ ಮಗನಾದ ಮಹೇಶನಿಗೆ ಬೈದು ಬುದ್ದಿ ಹೇಳಿದ್ದಾನೆ. ಇದಕ್ಕೆ ಕೋಪಗೊಂಡ ಮಗ ತಂದೆಗೆ ಬಡಿಗೆಯಿಂದ ಮೊದಲು ಮುಖಕ್ಕೆ ಆಮೇಲೆ ತಲೆಗೆ ಹೊಡೆದ ಕಾರಣ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಈ ಕುರಿತು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



