August 17, 2026
Monday, August 17, 2026
spot_img

ಶಾಸಕ ಸ್ಥಾನ ಉಳಿಸಿಕೊಂಡ ವಿನಯ್ ಕುಲಕರ್ಣಿ: ವಿಧಾನಸಭೆ ಸಚಿವಾಲಯದಿಂದ ಅನರ್ಹತೆ ರದ್ದು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಲವು ತಿಂಗಳ ರಾಜಕೀಯ ಮತ್ತು ಕಾನೂನು ಹೋರಾಟದ ಬಳಿಕ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಕಾನೂನು ಗೆಲುವು ಸಿಕ್ಕಿದೆ.

ಹೈಕೋರ್ಟ್ ಆದೇಶದ ಬೆನ್ನಲ್ಲೇ ವಿಧಾನಸಭೆ ಸಚಿವಾಲಯವು ಅವರ ಶಾಸಕ ಸ್ಥಾನಕ್ಕೆ ವಿಧಿಸಲಾಗಿದ್ದ ಅನರ್ಹತೆ ಆದೇಶವನ್ನು ರದ್ದುಪಡಿಸಿದ್ದು, ಮತ್ತೆ ಶಾಸಕರಾಗಿ ಕಾರ್ಯನಿರ್ವಹಿಸಲು ಅಧಿಕೃತ ದಾರಿ ಸುಗಮವಾಗಿದೆ.

ಹೈಕೋರ್ಟ್ ಆದೇಶದ ಬಳಿಕ ಕ್ರಮ

ಇತ್ತೀಚೆಗೆ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್, ವಿನಯ್ ಕುಲಕರ್ಣಿ ವಿರುದ್ಧದ ಪ್ರಕರಣದಲ್ಲಿ ನೀಡಲಾಗಿದ್ದ ಶಿಕ್ಷೆ ಹಾಗೂ ದೋಷಿ ತೀರ್ಪಿಗೆ ತಡೆ ನೀಡುವ ಜೊತೆಗೆ ಜಾಮೀನು ಮಂಜೂರು ಮಾಡಿತ್ತು. ಇದರ ಬೆನ್ನಲ್ಲೇ ವಿಧಾನಸಭೆ ಸಚಿವಾಲಯ ಹೊಸ ಸುತ್ತೋಲೆ ಹೊರಡಿಸಿ ಅನರ್ಹತೆ ಆದೇಶವನ್ನು ರದ್ದುಗೊಳಿಸಿದೆ.

ಬೆಂಬಲಿಗರಲ್ಲಿ ಸಂಭ್ರಮ

ಈ ಬೆಳವಣಿಗೆಯ ಬಳಿಕ ಧಾರವಾಡ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ವಿನಯ್ ಕುಲಕರ್ಣಿ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದರು. ಹೈಕೋರ್ಟ್ ಪ್ರಕರಣದ ಇತರೆ ಆರೋಪಿಗಳಿಗೂ ಜಾಮೀನು ನೀಡಿದ್ದು, ಪ್ರಕರಣದ ವಿಚಾರಣೆ ಮುಂದುವರಿಯಲಿದೆ.

ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನ ಮರುಸ್ಥಾಪನೆಯಾಗಿರುವುದು ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ ಗಮನ ಸೆಳೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !