September 27, 2026
Sunday, September 27, 2026
spot_img

ಬಜ್ಜಿ-ಬೋಂಡಾ ಕಟ್ಟೋಕೆ ನ್ಯೂಸ್ ಪೇಪರ್ ಬಳಸಿದ್ರೆ ಹುಷಾರ್: ಆಹಾರ ಮಾರಾಟಗಾರರಿಗೆ fssai ಖಡಕ್ ವಾರ್ನಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಹಾರ ಪದಾರ್ಥಗಳನ್ನು ಪತ್ರಿಕೆಯಲ್ಲಿ ಸುತ್ತಿ ನೀಡುವ ಪದ್ಧತಿ ಆರೋಗ್ಯಕ್ಕೆ ಅಪಾಯಕಾರಿಯಾಗಿದ್ದು, ಇಂತಹ ಕ್ರಮಗಳನ್ನು ತಕ್ಷಣ ನಿಲ್ಲಿಸುವಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಆಹಾರ ಉದ್ಯಮಿಗಳಿಗೆ ಸೂಚನೆ ನೀಡಿದೆ. ಆಹಾರ ಸುರಕ್ಷತೆ ಕಾಪಾಡುವ ಉದ್ದೇಶದಿಂದ ಈ ಎಚ್ಚರಿಕೆ ಹೊರಡಿಸಲಾಗಿದೆ.

ಶಾಯಿಯಲ್ಲೇ ಅಡಗಿದೆ ಆರೋಗ್ಯದ ಅಪಾಯ

ಪತ್ರಿಕೆ ಮುದ್ರಣಕ್ಕೆ ಬಳಸುವ ಶಾಯಿಯಲ್ಲಿ ಸೀಸ ಸೇರಿದಂತೆ ಹಲವು ರಾಸಾಯನಿಕ ಅಂಶಗಳು ಇರುತ್ತವೆ. ಇವು ಆಹಾರದೊಂದಿಗೆ ಮಿಶ್ರಣಗೊಂಡರೆ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಇದನ್ನೂ ಓದಿ:

ಅಸ್ವಚ್ಛತೆಯಿಂದ ಹೆಚ್ಚುವ ಸೋಂಕಿನ ಭೀತಿ

ಪತ್ರಿಕೆಗಳು ಹಲವಾರು ಕೈಗಳಿಂದ ಹಾದು ಹೋಗುವುದರಿಂದ ಹಾಗೂ ವಿವಿಧ ಸ್ಥಳಗಳಲ್ಲಿ ಸಂಗ್ರಹವಾಗುವುದರಿಂದ ಅವುಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಾಣುಗಳ ಪ್ರಮಾಣ ಹೆಚ್ಚಿರಬಹುದು. ಇಂತಹ ಪತ್ರಿಕೆಗಳಲ್ಲಿ ಆಹಾರ ಸುತ್ತಿದರೆ ಕಲುಷಿತವಾಗುವ ಅಪಾಯ ಹೆಚ್ಚುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ.

ಫುಡ್ ಗ್ರೇಡ್ ಪ್ಯಾಕಿಂಗ್ ಕಡ್ಡಾಯ

ಹೋಟೆಲ್‌ಗಳು, ಬೀದಿ ಬದಿ ಆಹಾರ ಮಾರಾಟಗಾರರು, ಕ್ಲೌಡ್ ಕಿಚನ್‌ಗಳು ಹಾಗೂ ಕ್ಯಾಟರಿಂಗ್ ಸಂಸ್ಥೆಗಳು ಕಡ್ಡಾಯವಾಗಿ ಆಹಾರ ದರ್ಜೆಯ ಪ್ಯಾಕೇಜಿಂಗ್ ವಸ್ತುಗಳನ್ನು ಮಾತ್ರ ಬಳಸಬೇಕು ಎಂದು ಸೂಚಿಸಲಾಗಿದೆ. ಗ್ರಾಹಕರೂ ಆಹಾರ ಖರೀದಿಸುವಾಗ ಸುರಕ್ಷಿತ ಪ್ಯಾಕಿಂಗ್‌ಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಲಾಗಿದೆ.

Must Read