ಬದಲಾಗುತ್ತಿರುವ ಹವಾಮಾನ, ಮಾಲಿನ್ಯ, ದೇಹದಲ್ಲಿನ ನೀರಿನ ಕೊರತೆ ಮತ್ತು ಅತಿಯಾದ ಕೆಮಿಕಲ್ ಯುಕ್ತ ಲಿಪ್‌ಸ್ಟಿಕ್‌ಗಳ ಬಳಕೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರಲ್ಲಿ ತುಟಿಗಳು ಕಪ್ಪಾಗುವ ಮತ್ತು ಒಡೆಯುವ ಸಮಸ್ಯೆ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದೆ. ಮುಖದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ತುಟಿಗಳ ಪಾತ್ರ ದೊಡ್ಡದಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಪ್ರೊಡಕ್ಟ್‌ಗಳ ಬದಲು ನಮ್ಮ ಅಡುಗೆಮನೆಯಲ್ಲಿಯೇ ಇರುವ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಕಪ್ಪಾದ ತುಟಿಗಳನ್ನು ಮತ್ತೆ ಮೃದು ಹಾಗೂ ಗುಲಾಬಿ ಬಣ್ಣಕ್ಕೆ ಬದಲಾಯಿಸಬಹುದು. ಅದಕ್ಕಾಗಿ ಸುಲಭವಾಗಿ ಮಾಡಬಹುದಾದ ಅತ್ಯುತ್ತಮ ಲಿಪ್ ಸ್ಕ್ರಬ್‌ಗಳ ಬಗ್ಗೆ ತಿಳಿಯೋಣ.
ಜೇನುತುಪ್ಪ ಮತ್ತು ಸಕ್ಕರೆ ಲಿಪ್ ಸ್ಕ್ರಬ್
ಸಕ್ಕರೆಯು ತುಟಿಗಳ ಮೇಲಿರುವ ಡೆಡ್ ಸ್ಕಿನ್‌ನ್ನು ತೆಗೆದುಹಾಕಲು ಸಹಾಯ ಮಾಡಿದರೆ, ಜೇನುತುಪ್ಪವು ನೈಸರ್ಗಿಕ ಮೊಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ.1 ಚಮಚ ಸಕ್ಕರೆ ಮತ್ತು 1/2 ಚಮಚ ಅಪ್ಪಟ ಜೇನುತುಪ್ಪವನ್ನು ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ಮಾಡಿಕೊಳ್ಳಬೇಕು. ಈ ಮಿಶ್ರಣವನ್ನು ತುಟಿಗಳ ಮೇಲೆ ಹಚ್ಚಿ, ಬೆರಳಿನಿಂದ 2ನಿಮಿಷಗಳ ಕಾಲ ವೃತ್ತಾಕಾರವಾಗಿ ಹಗುರವಾಗಿ ಮಸಾಜ್ ಮಾಡಿ. ನಂತರ ಉಗುರುಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಬೇಕು.
ಬೀಟ್‌ರೂಟ್ ಮತ್ತು ತೆಂಗಿನ ಎಣ್ಣೆ ಸ್ಕ್ರಬ್
ಬೀಟ್‌ರೂಟ್ ತುಟಿಗಳಿಗೆ ನೈಸರ್ಗಿಕವಾಗಿ ಗುಲಾಬಿ ಬಣ್ಣವನ್ನು ನೀಡಲು ಅತ್ಯುತ್ತಮವಾದ ಪದಾರ್ಥವಾಗಿದೆ 1 ಚಮಚ ಸಕ್ಕರೆ, 1/2 ಚಮಚ ತೆಂಗಿನ ಎಣ್ಣೆ ಮತ್ತು1 ಚಮಚ ತಾಜಾ ಬೀಟ್‌ರೂಟ್ ರಸವನ್ನು ಸೇರಿಸಿ ಚೆನ್ನಾಗಿ ಕಲಸಿಕೊಂಡು. ಈ ಸ್ಕ್ರಬ್ ಅನ್ನು ತುಟಿಗಳಿಗೆ ಹಚ್ಚಿ1 ರಿಂದ 2 ನಿಮಿಷ ಹಗುರವಾಗಿ ಸ್ಕ್ರಬ್ ಮಾಡಿ ತೊಳೆದರೆ, ನಿಮ್ಮ ತುಟಿಗಳು ತಕ್ಷಣವೇ ತಿಳಿ ಗುಲಾಬಿ ಬಣ್ಣಕ್ಕೆ ತಿರುಗುತ್ತವೆ.
ಕಾಫಿ ಮತ್ತು ಆಲಿವ್ ಆಯಿಲ್ ಸ್ಕ್ರಬ್
ಕಾಫಿಯಲ್ಲಿರುವ ಆ್ಯಂಟಿ-ಆಕ್ಸಿಡೆಂಟ್‌ಗಳು ಸೂರ್ಯನ ಬಿಸಿಲಿನಿಂದ ಕಪ್ಪಾದ ತುಟಿಗಳ ಬಣ್ಣವನ್ನು ತಿಳಿಗೊಳಿಸಲು ಉತ್ತಮವಾಗಿವೆ.1/2 ಚಮಚ ಕಾಫಿ ಪುಡಿ, 1/2 ಚಮಚ ಸಕ್ಕರೆ ಮತ್ತು1 ಚಮಚ ಆಲಿವ್ ಆಯಿಲ್ ಅಥವಾ ಬಾದಾಮಿ ಎಣ್ಣೆಯನ್ನು ಒಟ್ಟಿಗೆ ಸೇರಿಸಿ ಗಟ್ಟಿಯಾದ ಮಿಶ್ರಣ ಸಿದ್ಧಪಡಿಸಿ, ವಾರಕ್ಕೆ ಎರಡು ಬಾರಿ ಈ ಸ್ಕ್ರಬ್ ಬಳಸಿ ತುಟಿಗಳನ್ನು ಸ್ವಚ್ಛಗೊಳಿಸುವುದರಿಂದ ತುಟಿಗಳ ಕಪ್ಪು ಕಲೆಗಳು ನಿವಾರಣೆಯಾಗುತ್ತವೆ.
ಪಾಲಿಸಬೇಕಾದ ಪ್ರಮುಖ ಮುನ್ನೆಚ್ಚರಿಕೆಗಳು:
ತುಟಿಗಳ ಚರ್ಮ ತುಂಬಾ ಸೂಕ್ಷ್ಮವಾಗಿರುತ್ತದೆ. ಆದ್ದರಿಂದ ಸ್ಕ್ರಬ್ ಮಾಡುವಾಗ ಯಾವುದೇ ಕಾರಣಕ್ಕೂ ಜೋರಾಗಿ ಉಜ್ಜಬಾರದು.
ಈ ನೈಸರ್ಗಿಕ ಲಿಪ್ ಸ್ಕ್ರಬ್‌ಗಳನ್ನು ವಾರಕ್ಕೆ1 ರಿಂದ 3 ಬಾರಿ ಮಾತ್ರ ಬಳಸಬೇಕು. ಪ್ರತಿದಿನ ಸ್ಕ್ರಬ್ ಮಾಡುವುದರಿಂದ ತುಟಿಗಳು ಇನ್ನು ಹೆಚ್ಚು ಒಣಗಬಹುದು.
ಸ್ಕ್ರಬ್ ಮಾಡಿದ ತಕ್ಷಣ ತುಟಿಗಳ ತೇವಾಂಶವನ್ನು ಕಾಪಾಡಿಕೊಳ್ಳಲು ಉತ್ತಮ ಗುಣಮಟ್ಟದ ಲಿಪ್ ಬಾಮ್ ಅಥವಾ ಸ್ವಲ್ಪ ಮನೆಯ ತುಪ್ಪ/ಬೆಣ್ಣೆಯನ್ನು ಹಚ್ಚಿಬೇಕು.



