August 17, 2026
Monday, August 17, 2026
spot_img

Omelette Pizza | ಬ್ರೆಡ್ ಬೇಡ, ಬೇಸ್ ಬೇಡ: ಮನೆಯಲ್ಲೇ ಮಾಡಿ ಟೇಸ್ಟಿ ಆಮ್ಲೆಟ್ ಪಿಜ್ಜಾ

ಮೊಟ್ಟೆ ಪ್ರಿಯರಿಗೆ ಆಮ್ಲೆಟ್ ಪಿಜ್ಜಾ ಒಂದು ಸುಲಭ ಮತ್ತು ಆರೋಗ್ಯಕರ ತಿಂಡಿ. ಬ್ರೆಡ್ ಅಥವಾ ಪಿಜ್ಜಾ ಬೇಸ್ ಇಲ್ಲದೇ ಕೇವಲ ಮೊಟ್ಟೆ ಮತ್ತು ಕೆಲವು ತರಕಾರಿಗಳ ಸಹಾಯದಿಂದ ಈ ರುಚಿಕರ ಖಾದ್ಯವನ್ನು ತಯಾರಿಸಬಹುದು. ಬೆಳಗಿನ ಉಪಾಹಾರ ಅಥವಾ ಸಂಜೆ ಸ್ನ್ಯಾಕ್‌ಗೆ ಇದು ಬೆಸ್ಟ್.

ಬೇಕಾಗುವ ಪದಾರ್ಥಗಳು

ಮೊಟ್ಟೆ – 2
ಈರುಳ್ಳಿ – 1 ಸಣ್ಣದು (ಸಣ್ಣದಾಗಿ ಹೆಚ್ಚಿದ್ದು)
ಟೊಮ್ಯಾಟೊ – 1 ಸಣ್ಣದು (ಸಣ್ಣದಾಗಿ ಹೆಚ್ಚಿದ್ದು)
ಕ್ಯಾಪ್ಸಿಕಂ – 2 ಚಮಚ
ಹಸಿಮೆಣಸಿನಕಾಯಿ – 1
ಉಪ್ಪು – ರುಚಿಗೆ ತಕ್ಕಷ್ಟು
ಕರಿಮೆಣಸು ಪುಡಿ – ½ ಟೀಸ್ಪೂನ್
ಓರೆಗಾನೋ ಅಥವಾ ಮಿಕ್ಸ್ಡ್ ಹರ್ಬ್ಸ್ – ಸ್ವಲ್ಪ
ತುರಿದ ಚೀಸ್ – 2 ರಿಂದ 3 ಚಮಚ
ಎಣ್ಣೆ ಅಥವಾ ಬೆಣ್ಣೆ – 1 ಟೀಸ್ಪೂನ್

ಮಾಡುವ ವಿಧಾನ

ಒಂದು ಬಟ್ಟಲಿನಲ್ಲಿ ಮೊಟ್ಟೆ ಒಡೆದು ಹಾಕಿ. ಅದಕ್ಕೆ ಈರುಳ್ಳಿ, ಟೊಮ್ಯಾಟೊ, ಕ್ಯಾಪ್ಸಿಕಂ, ಹಸಿಮೆಣಸಿನಕಾಯಿ, ಉಪ್ಪು ಮತ್ತು ಕರಿಮೆಣಸು ಪುಡಿ ಸೇರಿಸಿ ಚೆನ್ನಾಗಿ ಕಲೆಸಿ.

ನಾನ್‌ಸ್ಟಿಕ್ ಪ್ಯಾನ್‌ಗೆ ಸ್ವಲ್ಪ ಎಣ್ಣೆ ಅಥವಾ ಬೆಣ್ಣೆ ಹಾಕಿ ಬಿಸಿ ಮಾಡಿ. ನಂತರ ಮೊಟ್ಟೆಯ ಮಿಶ್ರಣವನ್ನು ಸುರಿದು ಮಧ್ಯಮ ಉರಿಯಲ್ಲಿ ಬೇಯಿಸಿ.

ಮೇಲ್ಭಾಗಕ್ಕೆ ತುರಿದ ಚೀಸ್ ಮತ್ತು ಸ್ವಲ್ಪ ಓರೆಗಾನೋ ಸವರಿ. ಮುಚ್ಚಳ ಹಾಕಿ 2-3 ನಿಮಿಷಗಳ ಕಾಲ ಚೀಸ್ ಕರಗುವವರೆಗೆ ಬೇಯಿಸಿ.

ಚೀಸ್ ಚೆನ್ನಾಗಿ ಕರಗಿದ ಬಳಿಕ ಆಮ್ಲೆಟ್ ಪಿಜ್ಜಾವನ್ನು ತುಂಡುಗಳಾಗಿ ಕತ್ತರಿಸಿ ಟೊಮ್ಯಾಟೊ ಸಾಸ್ ಜೊತೆಗೆ ಸವಿಯಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !