September 3, 2026
Thursday, September 3, 2026
spot_img

CINE | ರಣ್‌ವೀರ್‌ ಎಡವಟ್ಟಿನಿಂದ ಕೋಟಿ ಕೋಟಿ ರೂಪಾಯಿ ಲಾಸ್‌, ಡಾನ್‌ 3 ಕೈ ಬಿಟ್ಟ ಫರ್ಹಾನ್‌ ಅಕ್ತರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಲಿವುಡ್‌ನ ಬಹುನಿರೀಕ್ಷಿತ ಡಾನ್ 3 ಸಿನಿಮಾ ಶೂಟಿಂಗ್‌ ನಿಂತುಹೋಗಿದೆ. ಸಿನಿಮಾ ಒಪ್ಪಿಕೊಂಡಿದ್ದ ರಣ್‌ವೀರ್‌ ಸಿಂಗ್‌ ಧುರಂಧರ್‌ನ ಯಶಸ್ಸಿನ ನಂತರ ಸಿನಿಮಾದಿಂದ ಹೊರಕ್ಕೆ ಬಂದಿದ್ದಾರೆ. ಇದಾದಮೇಲೆ ಸಿನಿಮಾ ಸೆಟ್ಟೇರೋದಿಲ್ಲ ಎಂದು ಹೇಳಲಾಗಿತ್ತು. ಅಂತೆಯೇ ಇದೀಗ ನಟ ಫರ್ಹಾನ್ ಅಖ್ತರ್ ಈ ಪ್ರಾಜೆಕ್ಟ್ ಅನ್ನು ಸದ್ಯಕ್ಕೆ ಬದಿಗೆ ತಳ್ಳಿದ್ದಾರೆ.

ಈ ಸಿನಿಮಾಗಾಗಿ ಕಾಂಪನ್‌ಸೇಷನ್‌ ಬೇಕು ಎಂದು ಕೋರ್ಟ್‌ ಮೆಟ್ಟಿಲೇರಿದ್ದ ಫರ್ಹಾನ್‌ ಅಖ್ತರ್‌ ಡಾನ್‌ ಸಿನಿಮಾ ಬಗೆಗಿನ ಆಲೋಚನೆ ಬದಿಗಿಟ್ಟು ಹೊಸ ಸಿನಿಮಾದ ಕಡೆ ಗಮನಹರಿಸಿದ್ದಾರೆ. ಭಾರತೀಯ ಸಿನಿರಂಗದ ದಂತಕತೆ ಆರ್‌.ಡಿ. ಬರ್ಮನ್‌ ಅವರ ಬಯೋಪಿಕ್‌ಗಾಗಿ ತಯಾರಿ ನಡೆಯುತ್ತಿದೆ. ಎಂ.ಎಸ್‌. ಧೋನಿ: ದಿ ಅನ್‌ಟೋಲ್ಡ್‌ ಸ್ಟೋರಿ ನಿರ್ದೇಶಿಸಿದ ನೀರಜ್‌ ಪಾಂಡೆ ಆರ್‌.ಡಿ. ಬರ್ಮನ್‌ ಸಿನಿಮಾಗೆ ಆಕ್ಷನ್‌ ಕಟ್‌ ಹೇಳ್ತಿದ್ದಾರೆ.

ರಣವೀರ್ ಸಿಂಗ್ ಹೊಸ ‘ಡಾನ್’ ಆಗಲಿದ್ದಾರೆ ಎಂದು ಘೋಷಿಸಿದಾಗ ಅಭಿಮಾನಿಗಳಲ್ಲಿ ಭಾರಿ ಕುತೂಹಲವಿತ್ತು. ಆದರೆ, ಸ್ಕ್ರಿಪ್ಟ್ ಫೈನಲ್ ಆಗದ ಕಾರಣ ಮತ್ತು ಶೂಟಿಂಗ್ ಪದೇ ಪದೇ ತಡವಾಗುತ್ತಿದ್ದರಿಂದ ಬೇಸತ್ತ ರಣವೀರ್ ಚಿತ್ರದಿಂದ ಹೊರನಡೆದಿದ್ದರು ಎನ್ನಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !