June 12, 2026
Friday, June 12, 2026
spot_img

FOOD | ಪ್ರೋಟೀನ್‌, ಫೈಬರ್‌ ಸಮೃದ್ಧ ರಾಗಿ ಖಿಚಡಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ರಾಗಿ ಖಿಚಡಿ ಆರೋಗ್ಯಕರ ಆಹಾರಗಳಲ್ಲಿ ಒಂದಾಗಿದೆ. ರಾಗಿ, ಹೆಸರುಬೇಳೆ ಮತ್ತು ತರಕಾರಿಗಳಿಂದ ತಯಾರಾಗುವ ಈ ಖಾದ್ಯವು ಮಧ್ಯಾಹ್ನದ ಊಟಕ್ಕೂ, ರಾತ್ರಿ ಲಘು ಭೋಜನಕ್ಕೂ ಸೂಕ್ತವಾಗಿದೆ.

ಬೇಕಾಗುವ ಪದಾರ್ಥಗಳು

ರಾಗಿ – ½ ಕಪ್
ಹೆಸರುಬೇಳೆ (ಮೂಂಗ್ ದಾಲ್) – ½ ಕಪ್
ಕ್ಯಾರೆಟ್‌, ಬೀನ್ಸ್‌, ಬಟಾಣಿ ಅಥವಾ ಆಲೂಗಡ್ಡೆ – ½ ಕಪ್
ಈರುಳ್ಳಿ – 1
ಟೊಮೆಟೊ – 1
ಹಸಿಮೆಣಸಿನಕಾಯಿ – 1 ಅಥವಾ 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಜೀರಿಗೆ – ½ ಟೀ ಸ್ಪೂನ್
ಅರಿಶಿನ – ¼ ಟೀ ಸ್ಪೂನ್
ಖಾರದ ಪುಡಿ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ತುಪ್ಪ – 2 ಚಮಚ
ನೀರು – 2½ ರಿಂದ 3 ಕಪ್

ಮಾಡುವ ವಿಧಾನ

ಮೊದಲು ರಾಗಿ ಮತ್ತು ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು ಸುಮಾರು 20 ರಿಂದ 30 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ.

ಕುಕ್ಕರ್‌ನಲ್ಲಿ ತುಪ್ಪ ಬಿಸಿ ಮಾಡಿ ಜೀರಿಗೆ ಹಾಕಿ. ಬಳಿಕ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ ಹಾಗೂ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹುರಿಯಿರಿ.

ಟೊಮೆಟೊ ಮತ್ತು ನಿಮ್ಮ ಇಷ್ಟದ ತರಕಾರಿಗಳನ್ನು ಹಾಕಿ ಎರಡು ನಿಮಿಷಗಳ ಕಾಲ ಬಾಡಿಸಿಕೊಳ್ಳಿ.

ನೆನೆಸಿದ ರಾಗಿ, ಹೆಸರುಬೇಳೆ, ಅರಿಶಿನ, ಖಾರದ ಪುಡಿ, ಉಪ್ಪು ಹಾಗೂ ನೀರನ್ನು ಸೇರಿಸಿ ಕುಕ್ಕರ್ ಮುಚ್ಚಿ ಮಧ್ಯಮ ಉರಿಯಲ್ಲಿ 3 ರಿಂದ 4 ಸೀಟಿ ಬರುವವರೆಗೆ ಬೇಯಿಸಿ.

ಬೇಯಿಸಿದ ರಾಗಿ ಖಿಚಡಿಯ ಮೇಲೆ ಸ್ವಲ್ಪ ತುಪ್ಪ ಹಾಕಿ ಬಿಸಿಬಿಸಿಯಾಗಿ ಸವಿಯಿರಿ. ಆರೋಗ್ಯಕರ ಹಾಗೂ ಹೊಟ್ಟೆ ತುಂಬಿಸುವ ಈ ಖಾದ್ಯ ತೂಕ ಇಳಿಸಿಕೊಳ್ಳುವವರಿಗೂ ಉತ್ತಮ ಆಯ್ಕೆಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !