June 12, 2026
Friday, June 12, 2026
spot_img

HEALTH | ಮಣಿಕಟ್ಟಿನ ಮೇಲಿನ ‘ಮಿನಿ ಡಾಕ್ಟರ್’: ಸ್ಮಾರ್ಟ್‌ವಾಚ್‌ಗಳು ನಮ್ಮ ಆರೋಗ್ಯವನ್ನು ನಿಜವಾಗಿಯೂ ಕಾಪಾಡುತ್ತವೆಯೇ?

ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ವಾಚ್‌ಗಳು ಕೇವಲ ಸಮಯ ನೋಡುವ ಅಥವಾ ಮೊಬೈಲ್ ನೋಟಿಫಿಕೇಶನ್ ಪಡೆಯುವ ಸಾಧನಗಳಾಗಿ ಉಳಿದಿಲ್ಲ. ಬದಲಿಗೆ, ಅವು ನಮ್ಮ ಮಣಿಕಟ್ಟಿನ ಮೇಲಿರುವ ‘ಮಿನಿ ಡಾಕ್ಟರ್’ ತರಹ ಬಿಂಬಿತವಾಗುತ್ತಿವೆ. ಹೃದಯ ಬಡಿತ, ರಕ್ತದಲ್ಲಿನ ಆಮ್ಲಜನಕದ ಪ್ರಮಾಣ, ನಿದ್ದೆಯ ಹಂತಗಳು ಮತ್ತು ನಾವು ನಡೆಯುವ ಹೆಜ್ಜೆಗಳನ್ನು ಇವು ನಿರಂತರವಾಗಿ ಟ್ರ್ಯಾಕ್ ಮಾಡುತ್ತವೆ. ಆದರೆ, ತಾಂತ್ರಿಕ ಮತ್ತು ವೈದ್ಯಕೀಯ ದೃಷ್ಟಿಕೋನದಿಂದ ನೋಡಿದಾಗ, ಈ ಗ್ಯಾಜೆಟ್‌ಗಳು ನಮ್ಮ ಆರೋಗ್ಯವನ್ನು ನಿಜವಾಗಿಯೂ ಕಾಪಾಡುತ್ತವೆಯೇ ಅಥವಾ ಇವು ಕೇವಲ ಒಂದು ಮಾರ್ಕೆಟಿಂಗ್ ಗಿಮಿಕ್ ಆಗಿವೆಯೇ? ಎಂಬುದರ ಬಗ್ಗೆ ತಿಳಿಯೋಣ.

ಸ್ಮಾರ್ಟ್‌ವಾಚ್‌ಗಳು ಹೇಗೆ ಕೆಲಸ ಮಾಡುತ್ತವೆ?
ಸ್ಮಾರ್ಟ್‌ವಾಚ್‌ಗಳ ಹಿಂಭಾಗದಲ್ಲಿ ಹಸಿರು ಅಥವಾ ಕೆಂಪು ಲೈಟ್ ಮಿನುಗುವುದನ್ನು ನೀವು ಗಮನಿಸಿರಬಹುದು. ಇದನ್ನು ಪಿಪಿಜಿ ತಂತ್ರಜ್ಞಾನ ಎನ್ನಲಾಗುತ್ತದೆ. ಈ ತಂತ್ರಜ್ಞಾನವು ಚರ್ಮದ ಮೂಲಕ ರಕ್ತನಾಳಗಳಿಗೆ ಬೆಳಕನ್ನು ಹರಿಸುತ್ತದೆ. ರಕ್ತದ ಹರಿವಿನ ವೇಗಕ್ಕೆ ತಕ್ಕಂತೆ ಬೆಳಕಿನ ಪ್ರತಿಫಲನದಲ್ಲಿ ಆಗುವ ಬದಲಾವಣೆಯನ್ನು ಸೆನ್ಸಾರ್‌ಗಳು ಗುರುತಿಸಿ, ಹೃದಯದ ಬಡಿತವನ್ನು ಲೆಕ್ಕ ಹಾಕುತ್ತವೆ. ಅತ್ಯಾಧುನಿಕ ವಾಚ್‌ಗಳಲ್ಲಿ ಇಸಿಜಿ ಮತ್ತು ರಕ್ತದೊತ್ತಡವನ್ನು ಪತ್ತೆಹಚ್ಚುವ ಅತ್ಯಾಧುನಿಕ ಸೆನ್ಸಾರ್‌ಗಳನ್ನೂ ಬಳಸಲಾಗುತ್ತಿದೆ.

ಇವುಗಳಿಂದ ಆಗುವ ಪ್ರಮುಖ ಪ್ರಯೋಜನಗಳು
ಆರಂಭಿಕ ಎಚ್ಚರಿಕೆ
ಹೃದಯ ಬಡಿತದಲ್ಲಿ ಇದ್ದಕ್ಕಿದ್ದಂತೆ ಏರುಪೇರಾದರೆ ಅಥವಾ ರಕ್ತದಲ್ಲಿ ಆಕ್ಸಿಜನ್ ಮಟ್ಟ ಕುಸಿದರೆ ಈ ವಾಚ್‌ಗಳು ತಕ್ಷಣವೇ ಎಚ್ಚರಿಕೆ ನೀಡುತ್ತವೆ. ಜಾಗತಿಕವಾಗಿ ಅನೇಕ ಜನರ ಜೀವ ಉಳಿಸುವಲ್ಲಿ ಆಪಲ್ ಅಥವಾ ಸ್ಯಾಮ್‌ಸಂಗ್ ಸ್ಮಾರ್ಟ್‌ವಾಚ್‌ಗಳ ಇಸಿಜಿ ಅಲರ್ಟ್‌ಗಳು ನೆರವಾಗಿರುವ ನೈಜ ಉದಾಹರಣೆಗಳಿವೆ.

ದೈಹಿಕ ಚಟುವಟಿಕೆಗೆ ಪ್ರೇರಣೆ
ನಾವು ಪ್ರತಿದಿನ ಎಷ್ಟು ಹೆಜ್ಜೆ ನಡೆದಿದ್ದೇವೆ, ಎಷ್ಟು ಕ್ಯಾಲೊರಿ ಬರ್ನ್ ಮಾಡಿದ್ದೇವೆ ಎಂದು ತೋರಿಸುವ ಮೂಲಕ ಇವು ನಮ್ಮನ್ನು ಸಕ್ರಿಯವಾಗಿರಲು ಪ್ರೇರೇಪಿಸುತ್ತವೆ.

ಅಪಘಾತವಾದಗ ಸಂದೇಶ ರವಾನೆ
ವಯಸ್ಸಾದವರು ಅಥವಾ ಒಂಟಿಯಾಗಿರುವವರು ಬಿದ್ದಾಗ ಈ ತಂತ್ರಜ್ಞಾನವು ತಕ್ಷಣವೇ ಅವರ ಕುಟುಂಬದವರಿಗೆ ಅಥವಾ ತುರ್ತು ಸೇವೆಗೆ ಲೊಕೇಶನ್ ಸಮೇತ ಸಂದೇಶ ರವಾನಿಸುತ್ತದೆ.

ಒತ್ತಡ ನಿರ್ವಹಣೆ
ದೇಹದಲ್ಲಿನ ಒತ್ತಡದ ಮಟ್ಟವನ್ನು ಪತ್ತೆಹಚ್ಚಿ, ಮನಸ್ಸನ್ನು ಪ್ರಶಾಂತಗೊಳಿಸಲು ಉಸಿರಾಟದ ವ್ಯಾಯಾಮಗಳನ್ನು ಸೂಚಿಸುತ್ತವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !