ಹಸಿ ಮೆಣಸಿನಕಾಯಿ ಎಂದರೆ ಮೊದಲು ನೆನಪಾಗುವುದೇ ಖಾರವಾದ ರುಚಿ. ತಿನ್ನುತ್ತಿದ್ದಂತೆಯೇ ನಾಲಗೆಯಲ್ಲಿ ಬಿಸಿ ಅನುಭವವಾಗಿ ಕಣ್ಣೀರು ಬರಿಸುವಷ್ಟು ಖಾರ. ಹೀಗಾಗಿ ಹಲವರು ತಡರಾ ತಂಟೆಗೆ ಹೋಗೋದಿಲ್ಲ. ಆದರೆ ಅದೆಷ್ಟೇ ಖಾರವಾಗಿದ್ದರೂ ಹಸಿ ಮೆಣಸಿನಕಾಯಿ ದೇಹಕ್ಕೆ ಅನೇಕ ಪೌಷ್ಟಿಕಾಂಶಗಳನ್ನು ನೀಡುವ ಪ್ರಮುಖ ಆಹಾರವಾಗಿದೆ. ಮನೆಯಲ್ಲಿ ಹಿರಿಯರು ಊಟದ ಜೊತೆ ಇದನ್ನು ಸುಲಭವಾಗಿ ತಿನ್ನುವುದು ಅದರ ಆರೋಗ್ಯಕಾರಿ ಗುಣಗಳ ಕಾರಣವೇ ಆಗಿದೆ.

ಗಾಢ ಹಸಿರು ಬಣ್ಣದ ಹಸಿ ಮೆಣಸಿನಕಾಯಿಯಲ್ಲಿ ಕಬ್ಬಿಣ, ಪೊಟಾಸಿಯಂ, ವಿಟಮಿನ್ ಸಿ ಮತ್ತು ವಿಟಮಿನ್ ಎ ಸಮೃದ್ಧವಾಗಿದೆ. ಈ ಅಂಶಗಳು ದೇಹದ ಕಾರ್ಯವೈಖರಿಯನ್ನು ಸುಧಾರಿಸುವುದಲ್ಲದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಮಿತವಾಗಿ ಆಹಾರದಲ್ಲಿ ಸೇರಿಸಿಕೊಂಡರೆ ಹಸಿ ಮೆಣಸಿನಕಾಯಿ ಜೀರ್ಣಕ್ರಿಯೆ ಸುಲಭಗೊಳಿಸುವುದು, ಶಕ್ತಿವರ್ಧನೆ ನೀಡುವುದು ಮತ್ತು ದೇಹದಲ್ಲಿ ಉಷ್ಣ ಪ್ರಭಾವವನ್ನು ಹೆಚ್ಚಿಸುತ್ತದೆ.
ಇದೇ ಅಲ್ಲದೆ, ಹಸಿ ಮೆಣಸಿನಕಾಯಿ ತ್ವಚೆಯ ಆರೋಗ್ಯಕ್ಕೂ ಸಹಕಾರಿ. ಇದರಲ್ಲಿ ಇರುವ ವಿಟಮಿನ್ ಇ ಚರ್ಮದ ಗೆರೆಗಳು, ಮೊಡವೆಗಳು ಹಾಗೂ ದದ್ದುಗಳನ್ನು ಕಡಿಮೆ ಮಾಡಲು ನೆರವಾಗುತ್ತದೆ. ನಿಯಮಿತ ಸೇವನೆಯಿಂದ ತ್ವಚೆಗೆ ಕಾಂತಿ ಬರುತ್ತದೆ.

ಒಟ್ಟಿನಲ್ಲಿ, ಹಸಿ ಮೆಣಸಿನಕಾಯಿ ಕೇವಲ ಖಾರದ ರುಚಿಯನ್ನು ನೀಡುವುದಲ್ಲದೆ, ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳ ಪ್ರಮುಖ ಮೂಲವಾಗಿದೆ. ಮಿತ ಪ್ರಮಾಣದಲ್ಲಿ ಸೇವಿಸಿದರೆ ಇದು ಆರೋಗ್ಯ ಕಾಪಾಡುವ ನೈಸರ್ಗಿಕ ಔಷಧಿಯಂತೆಯೇ ಕೆಲಸ ಮಾಡುತ್ತದೆ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)