June 12, 2026
Friday, June 12, 2026
spot_img

ನೇಣು ಬಿಗಿದುಕೊಂಡು ಜೀವನ ಮುಗಿಸಿದ ಟಿಸಿಎಸ್‌ ಉದ್ಯೋಗಿ, ಸಹೋದ್ಯೋಗಿಗಳ ವಿರುದ್ಧ ಕೇಸ್‌ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ನ ಐಟಿ ಸಂಸ್ಥೆಯ ಉದ್ಯೋಗಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದು, ಅದೇ ಕಂಪನಿಯ ಇಬ್ಬರು ಉದ್ಯೋಗಿಗಳು ಸೇರಿದಂತೆ ಮೂವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕೇಸ್‌ ದಾಖಲಿಸಲಾಗಿದೆ.

ಹಿಂಜವಾಡಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ 48 ವರ್ಷದ ಅಮಿತ್‌ ಬ್ರಹ್ಮ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಆಘಾತಕ್ಕೊಳಗಾದ ಪೋಷಕರು ಆಫೀಸ್‌ನಲ್ಲಿ ಕಿರುಕುಳ ಆಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ತಮ್ಮ ಆತ್ಮಹತ್ಯೆ ಪತ್ರದಲ್ಲಿ, ಕಂಪನಿಗೆ ತಮ್ಮ ಬಗ್ಗೆ ಅವಹೇಳನಕಾರಿ ಇಮೇಲ್‌ಗಳನ್ನು ಕಳುಹಿಸಿದ್ದಾರೆ ಎಂಬ ಆರೋಪದ ಮೇಲೆ ವಿನೋದ್ ಪಲಿಚಾ ಎಂಬ ಸ್ನೇಹಿತನ ಹೆಸರನ್ನು ಉಲ್ಲೇಖಿಸಿದ್ದಾರೆ. ಜೊತೆಗೆ ಅರ್ಚನಾ ಹಾಗೂ ಶಾಶ್ವತಿ ಎನ್ನುವ ಸಹೋದ್ಯೋಗಿಗಳು ಅಮಿತ್‌ ಅವರನ್ನು ಅವಮಾನಿಸುತ್ತಿದ್ದರು. ಕೆಲಸದಲ್ಲಿ ಕಿರಿಕಿರಿ ಮಾಡಿ ವಂಚಿಸಿದ್ದಾರೆ ಎಂದು ದೂರಲಾಗಿದೆ. ಈ ಹಿನ್ನೆಲೆಯನ್ನು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅಮಿತ್ ಕಾರ್ಯಕ್ಷಮತೆಗೆ ಛೀಮಾರಿ ಹಾಕಿದ ಇಬ್ಬರು ಮಹಿಳೆಯರು, ಸಹೋದ್ಯೋಗಿಗಳ ಸಮ್ಮುಖದಲ್ಲಿ ಕೆಲಸ ಬಿಡುವಂತೆ ಕೇಳಿಕೊಂಡರು ಮತ್ತು ಪ್ರತಿಕೂಲ ರೇಟಿಂಗ್ ನೀಡುವುದಾಗಿ ಬೆದರಿಕೆ ಹಾಕಿದರು ಎಂದು ಆತ್ಮಹತ್ಯೆ ಪತ್ರದಲ್ಲಿ ಹೇಳಲಾಗಿದೆ. “ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ನಾವು ಪ್ರಕರಣ ದಾಖಲಿಸಿದ್ದೇವೆ ಮತ್ತು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ. ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !