August 12, 2026
Wednesday, August 12, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 2 | ಗರಿಗರಿಯಾದ ರವೆ ರೊಟ್ಟಿ ಸವಿದಿದ್ದೀರಾ? 15 ನಿಮಿಷದಲ್ಲೇ ರೆಡಿ ಆಗುತ್ತೆ

ಬೆಳಗಿನ ಉಪಹಾರಕ್ಕೆ ಅಥವಾ ಸಂಜೆಯ ತಿಂಡಿಗೆ ಬೇಗನೆ ತಯಾರಿಸಬಹುದಾದ ರುಚಿಕರ ತಿನಿಸುಗಳಲ್ಲಿ ರವೆ ರೊಟ್ಟಿ ಕೂಡ ಒಂದು. ಈರುಳ್ಳಿ, ಹಸಿಮೆಣಸು ಮತ್ತು ಕೊತ್ತಂಬರಿ ಸೊಪ್ಪಿನ ಸುವಾಸನೆಯೊಂದಿಗೆ ತಯಾರಾಗುವ ಈ ರೊಟ್ಟಿ, ತೆಂಗಿನಕಾಯಿ ಚಟ್ನಿ ಜೊತೆ ಸವಿದರೆ ಅದರ ರುಚಿಯೇ ಬೇರೆ.

ಬೇಕಾಗುವ ಪದಾರ್ಥಗಳು

ಬಾಂಬೆ ರವೆ – 1 ಕಪ್
ಮೊಸರು – 2 ರಿಂದ 3 ಚಮಚ
ಈರುಳ್ಳಿ – 1 (ಸಣ್ಣದಾಗಿ ಹೆಚ್ಚಿದ್ದು)
ಹಸಿಮೆಣಸಿನಕಾಯಿ – 2
ಕೊತ್ತಂಬರಿ ಸೊಪ್ಪು – ಸ್ವಲ್ಪ
ಕರಿಬೇವು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ನೀರು – ಅಗತ್ಯವಿರುವಷ್ಟು
ಎಣ್ಣೆ – ಬೇಯಿಸಲು

ಮಾಡುವ ವಿಧಾನ

ಒಂದು ಪಾತ್ರೆಯಲ್ಲಿ ರವೆ, ಮೊಸರು, ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.

ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಮಿಶ್ರಣ ಮಾಡಿ. ಬಳಿಕ 10 ರಿಂದ 15 ನಿಮಿಷಗಳ ಕಾಲ ನೆನೆಯಲು ಬಿಡಿ.

ಕಾವಲಿಯನ್ನು ಬಿಸಿ ಮಾಡಿ ಸ್ವಲ್ಪ ಎಣ್ಣೆ ಸವರಿ. ಕೈಗೆ ನೀರು ಹಚ್ಚಿಕೊಂಡು ಹಿಟ್ಟನ್ನು ತೆಳುವಾಗಿ ರೊಟ್ಟಿಯ ಆಕಾರದಲ್ಲಿ ತಟ್ಟಿ.

ಮಧ್ಯಮ ಉರಿಯಲ್ಲಿ ಮುಚ್ಚಳ ಮುಚ್ಚಿ ಎರಡೂ ಬದಿಗಳು ಗರಿಗರಿಯಾಗುವವರೆಗೆ ಬೇಯಿಸಿ.

ಬಿಸಿ ಬಿಸಿ ರವೆ ರೊಟ್ಟಿಯನ್ನು ತೆಂಗಿನಕಾಯಿ ಚಟ್ನಿ ಅಥವಾ ಮೊಸರಿನೊಂದಿಗೆ ಸವಿದರೆ ಅದರ ರುಚಿ ಇನ್ನಷ್ಟು ಹೆಚ್ಚಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !