October 9, 2026
Friday, October 9, 2026
spot_img

ಪಕ್ಕದ ಮನೆಯಲ್ಲಿ ದುರ್ವಾಸನೆ ಬರ್ತಿದೆ ಎಂದು ಪೊಲೀಸರಿಗೆ ದೂರು ಕೊಟ್ಟ ಜನ, ಆಮೇಲೆ ಆಗಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಕ್ಕದ ಮನೆಯಿಂದ ದುರ್ವಾಸನೆ ಬರ್ತಿದೆ ಎಂದು ಪೊಲೀಸರಿಗೆ ದೂರು ಕೊಟ್ಟ ಜನ ಮನೆಯಲ್ಲಿ ಆಗಿದ್ದನ್ನು ನೋಡಿ ಶಾಕ್‌ ಆದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗದ ರವೀಂದ್ರ ನಗರದ ಮನೆಯೊಂದರಲ್ಲಿ ಮಹಿಳೆ ಹಾಗೂ ನಾಯಿಯೊಂದು ಮೃತಪಟ್ಟಿದ್ದು, ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹದಿಂದ ದುರ್ನಾತ ಬಂದಿದೆ.

57 ವರ್ಷದ ಪ್ರಭಾವತಿ ಹಾಗೂ ಅವರ ನಾಯಿ ಕೆಲವು ದಿನಗಳ ಹಿಂದೆ ಮೃತಪಟ್ಟಿದೆ. ಅಕ್ಕಪಕ್ಕದ ಮನೆಯವರಿಗೆ ವಾಸನೆ ಬರುವವರೆಗೂ ಯಾರಿಗೂ ಅನುಮಾನ ಬಂದಿಲ್ಲ. ವಾಸನೆ ಬಂದ ನಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಬೀಗ ಒಡೆದು ನೋಡಿದಾಗ ಶಾಕ್‌ ಆಗಿದ್ದಾರೆ.

ಮಹಿಳೆಯ ಸಾವಿಗೆ ಕಾರಣ ಏನು? ಇದು ಆತ್ಮಹತ್ಯೆಯಾ ಅಥವಾ ಕೊಲೆಯಾ? ಮಹಿಳೆ ಮೃತಪಟ್ಟು ದಿನಗಳಾದರೂ ಯಾಕೆ ಯಾರೂ ಅವರನ್ನು ಹುಡುಕಿಕೊಂಡು ಬಂದಿಲ್ಲ ಎನ್ನುವ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ.

Must Read