ಹೊಸದಿಗಂತ ವರದಿ ಹಳಿಯಾಳ:
ಹುಟ್ಟುಹಬ್ಬದ ಆಚರಣೆಯಲ್ಲಿ ಲಾಂಗ್ನಿಂದ ಕೇಕ್ ಕತ್ತರಿಸಿ ಮಾರಕಾಸ್ತ್ರಗಳನ್ನು ಪ್ರದರ್ಶಿಸಿದ ಆರೋಪದ ಮೇಲೆ ಹಳಿಯಾಳ ಪೊಲೀಸರು ಎಂಟು ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆಚರಣೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ ಹೆಡ್ ಕಾನ್ಸ್ಟೆಬಲ್ ಭೀಮಪ್ಪ ಕದರಮಂಡಲಗಿ ದೂರು ನೀಡಿದ್ದಾರೆ.
ನವೆಂಬರ್ 24ರಂದು ಸಂಜೆ 7 ಗಂಟೆ ಸುಮಾರಿಗೆ ವಿಡಿಯೊ ತಮ್ಮ ಗಮನಕ್ಕೆ ಬಂದಿದ್ದಾಗಿ ಭೀಮಪ್ಪ ದೂರಿನಲ್ಲಿ ತಿಳಿಸಿದ್ದಾರೆ. ಗುಂಪಿನವರು ಲಾಂಗ್ ಹಿಡಿದು ಕೇಕ್ ಕತ್ತರಿಸುವುದು ಹಾಗೂ ಮದ್ಯದ ಬಾಟಲಿಗಳನ್ನು ಹಿಡಿದು ಕೂಗಾಡುವುದು ವಿಡಿಯೊದಲ್ಲಿ ಕಾಣಿಸುತ್ತದೆ ಎಂದು ಅವರು ವಿವರಿಸಿದ್ದಾರೆ. ಈ ರೀತಿ ಆಯುಧಗಳನ್ನು ಪ್ರದರ್ಶಿಸುವುದರಿಂದ ಸಾರ್ವಜನಿಕರಲ್ಲಿ ಭೀತಿ ಉಂಟಾಗುವ ಮತ್ತು ಶಾಂತಿಗೆ ಧಕ್ಕೆ ಬರುವ ಸಾಧ್ಯತೆಯಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:
ದೂರಿನಲ್ಲಿ ನಾಲ್ವರ ಹೆಸರುಗಳನ್ನು ಉಲ್ಲೇಖಿಸಿದ್ದು, ಇತರ ನಾಲ್ವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಶಸ್ತ್ರಾಸ್ತ್ರ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯಡಿ ದಾಖಲಾದ ಪ್ರಕರಣದ (ಸಂಖ್ಯೆ 322/2026) ತನಿಖೆಯನ್ನು ಹಳಿಯಾಳ ಠಾಣೆಯ ಪಿಎಸ್ಐ ಕಿರಣ ಪಾಟೀಲ ನಡೆಸುತ್ತಿದ್ದಾರೆ.



