June 13, 2026
Saturday, June 13, 2026
spot_img

FOOD | ಕ್ಯಾಲೋರಿ ಕಮ್ಮಿ, ಪೌಷ್ಠಿಕಾಂಶ ಜಾಸ್ತಿ: ರಾತ್ರಿಯ ಹಗುರ ಊಟಕ್ಕೆ ಟ್ರೈ ಮಾಡಿ ಗೋಧಿ ಹಿಟ್ಟಿನ ಹೆಲ್ತಿ ನೂಡಲ್ಸ್

ಮಕ್ಕಳಿಗೆ ನೂಡಲ್ಸ್ ಎಂದರೆ ತುಂಬಾನೇ ಇಷ್ಟ. ಆದರೆ ಮೈದಾದಿಂದ ಮಾಡಿದ ನೂಡಲ್ಸ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದಕ್ಕಾಗಿಯೇ ಮನೆಯಲ್ಲೇ ಗೋಧಿ ಹಿಟ್ಟನ್ನು ಬಳಸಿ ಅತ್ಯಂತ ಸುಲಭವಾಗಿ ಮತ್ತು ಆರೋಗ್ಯಕರವಾಗಿ ಮಾಡಬಹುದಾದ “ಗೋಧಿ ಹಿಟ್ಟಿನ ವೆಜ್ ನೂಡಲ್ಸ್” ರೆಸಿಪಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು

ಗೋಧಿ ಹಿಟ್ಟು
ಉಪ್ಪು
ಎಣ್ಣೆ
ನೀರು
ಬೆಳ್ಳುಳ್ಳಿ
ಹಸಿಮೆಣಸಿನಕಾಯಿ
ಈರುಳ್ಳಿ
ಕ್ಯಾರೆಟ್
ಎಲೆಕೋಸು
ಕ್ಯಾಪ್ಸಿಕಂ
ಸೋಯಾ ಸಾಸ್
ಟೊಮೆಟೊ ಕೆಚಪ್
ಕಾಳುಮೆಣಸಿನ ಪುಡಿ
ವಿನೆಗರ್

ಮಾಡುವ ವಿಧಾನ:
ಮೊದಲು ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು, ಸ್ವಲ್ಪ ಉಪ್ಪು ಮತ್ತು 1 ಚಮಚ ಎಣ್ಣೆ ಹಾಕಿ ಮಿಕ್ಸ್ ಮಾಡಿ. ನಂತರ ನೀರು ಸೇರಿಸುತ್ತಾ ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಕಲಸಿಕೊಂಡು. ಹಿಟ್ಟನ್ನು 10 ನಿಮಿಷ ನೆನೆಯಲು ಬಿಡಿ. ಚಕ್ಕುಲಿ ಅಥವಾ ಶ್ಯಾವಿಗೆ ಒರಳಿಗೆ ಸಣ್ಣ ರಂಧ್ರವಿರುವ ಅಚ್ಚನ್ನು ಹಾಕಿ, ಅದಕ್ಕೆ ಸ್ವಲ್ಪ ಎಣ್ಣೆ ಸವರಿಕೊಂಡು. ಕಲಸಿದ ಹಿಟ್ಟನ್ನು ಇದರೊಳಗೆ ತುಂಬಿಸಿ. ಒಂದು ದೊಡ್ಡ ಪಾತ್ರೆಯಲ್ಲಿ 4-5 ಕಪ್ ನೀರು,1 ಚಮಚ ಎಣ್ಣೆ ಮತ್ತು ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ನೀರು ಚೆನ್ನಾಗಿ ಕುದಿಯುವಾಗ, ಶ್ಯಾವಿಗೆ ಒರಳಿನಿಂದ ನೇರವಾಗಿ ಕುದಿಯುವ ನೀರಿಗೆ ನೂಡಲ್ಸ್ ಅನ್ನು ಒತ್ತಿ. ಮಧ್ಯಮ ಉರಿಯಲ್ಲಿ4 ರಿಂದ 5 ನಿಮಿಷಗಳ ಕಾಲ ನೂಡಲ್ಸ್ ಅನ್ನು ಬೇಯಿಸಿ. ನಂತರ ಗ್ಯಾಸ್ ಆಫ್ ಮಾಡಿ, ಬಿಸಿ ನೀರನ್ನು ಸೋಸಿಕೊಳ್ಳಬೇಕು. ನಂತರ ಬೆಂದ ನೂಡಲ್ಸ್ ಒಂದಕ್ಕೊಂದು ಅಂಟಿಕೊಳ್ಳದಂತೆ ತಕ್ಷಣವೇ ಅದರ ಮೇಲೆ ತಣ್ಣೀರನ್ನು ಸುರಿದು ಪಕ್ಕಕ್ಕೆ ಎತ್ತಿಡಿ. ಈಗ ಹೋಮ್-ಮೇಡ್ ಗೋಧಿ ನೂಡಲ್ಸ್ ರೆಡಿಯಾಗುತ್ತದೆ.

ಈಗ ಒಂದು ದೊಡ್ಡ ಕಡಾಯಿಗೆ 2 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಕಾದ ನಂತರ ಹೆಚ್ಚಿದ ಬೆಳ್ಳುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ ಅರ್ಧ ನಿಮಿಷ ಹುರಿದ ನಂತರ ಹೆಚ್ಚಿದ ಈರುಳ್ಳಿ, ಕ್ಯಾರೆಟ್, ಎಲೆಕೋಸು ಮತ್ತು ಕ್ಯಾಪ್ಸಿಕಂ ತರಕಾರಿಗಳನ್ನು ಹಾಕಿ ಹೈ-ಫ್ಲೇಮ್‌ನಲ್ಲಿ ಬಾಡಿಸಿ, ಸೋಯಾ ಸಾಸ್, ಟೊಮೆಟೊ ಕೆಚಪ್, ವಿನೆಗರ್, ಕಾಳುಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಯದಾಗಿ, ನಾವು ಸಿದ್ಧಪಡಿಸಿಟ್ಟುಕೊಂಡ ಗೋಧಿ ನೂಡಲ್ಸ್ ಅನ್ನು ಈ ತರಕಾರಿ ಮಿಶ್ರಣಕ್ಕೆ ಸೇರಿಸಿ. ನೂಡಲ್ಸ್ ಕಟ್ ಆಗದಂತೆ ಹಗುರವಾಗಿ 2 ನಿಮಿಷಗಳ ಕಾಲ ಹೈ-ಫ್ಲೇಮ್‌ನಲ್ಲಿ ಚೆನ್ನಾಗಿ ಟಾಸ್ ಮಾಡಿ ಮಿಕ್ಸ್ ಮಾಡಿದರೆ ಸೂಪರ್ ಟೇಸ್ಟಿ ಮತ್ತು ಹೆಲ್ದಿಯಾದ ಗೋಧಿ ಹಿಟ್ಟಿನ ವೆಜ್ ನೂಡಲ್ಸ್ ಸಿದ್ಧವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !