June 14, 2026
Sunday, June 14, 2026
spot_img

‘ನಾನು ಸಲಿಂಗಿ ಅಲ್ಲ’: ನಟಿ ದಿಶಾ ಪಟಾನಿ ಜತೆಗಿನ ಸಂಬಂಧದ ವದಂತಿಗೆ ಮೌನಿ ರಾಯ್ ಖಡಕ್ ಸ್ಪಷ್ಟನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬಾಲಿವುಡ್ ನಟಿ ಮೌನಿ ರಾಯ್ ತಮ್ಮ ಲೈಂಗಿಕ ದೃಷ್ಟಿಕೋನ ಮತ್ತು ನಟಿ ದಿಶಾ ಪಟಾನಿ ಜತೆಗಿನ ಸಂಬಂಧದ ಕುರಿತು ಹರಡಿದ್ದ ಎಲ್ಲಾ ಊಹಾಪೋಹಗಳಿಗೆ ಅಧಿಕೃತವಾಗಿ ಬ್ರೇಕ್ ಹಾಕಿದ್ದಾರೆ. ಉದ್ಯಮಿ ಸೂರಜ್ ನಂಬಿಯಾರ್‌ಯೊಂದಿಗಿನ ವಿಚ್ಛೇದನದ ಬಳಿಕ, ಸಾಮಾಜಿಕ ಜಾಲತಾಣಗಳಲ್ಲಿ ದಿಶಾ ಮತ್ತು ಮೌನಿ ಲಿಂಕ್-ಅಪ್ ಬಗ್ಗೆ ಭಾರಿ ಚರ್ಚೆಗಳು ನಡೆಯುತ್ತಿದ್ದವು.

ಮೌನಿ ರಾಯ್ ನೇರ ಉತ್ತರ:

ಯೂಟ್ಯೂಬರ್ ಮೋನಿಕಾ ಶರ್ಮಾ ಗೆ ನೀಡಿದ ಸಂದರ್ಶನದಲ್ಲಿ ಮೌನಿ ರಾಯ್ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಬಾಲಿವುಡ್‌ನಲ್ಲಿ ತನ್ನ ಬಗ್ಗೆ ಕೇಳಿಬಂದ ಅತಿ ದೊಡ್ಡ ವದಂತಿ ಯಾವುದು ಎಂಬ ಪ್ರಶ್ನೆಗೆ ಉತ್ತರಿಸಿದ ಮೌನಿ, “ನಾನು ಸಲಿಂಗಿ ಎಂಬುದು ಅತ್ಯಂತ ದೊಡ್ಡ ಸುಳ್ಳು ವದಂತಿ. ನಾನು ಸಲಿಂಗಿ ಅಲ್ಲ” ಎಂದು ನೇರವಾಗಿ ಹೇಳಿದ್ದಾರೆ.

ದಿಶಾ ಕೇವಲ ಆತ್ಮೀಯ ಗೆಳತಿ:

ದಿಶಾ ಪಟಾನಿ ಜತೆಗಿನ ನಿಕಟ ಒಡನಾಟದ ಬಗ್ಗೆ ಮಾತನಾಡಿದ ಅವರು, ದಿಶಾ ನನ್ನ ಕಷ್ಟ ಸುಖಗಳ ಎಲ್ಲಾ ಹಂತಗಳಲ್ಲೂ ಜತೆಯಾಗಿ ನಿಂತಿರುವ ಒಬ್ಬ ಅತ್ಯುತ್ತಮ ಗೆಳತಿ ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:

ಗೆಳತಿಯರ ಬೆಂಬಲ:

ಸೂರಜ್ ನಂಬಿಯಾರ್‌ರಿಂದ ಬೇರ್ಪಟ್ಟ ಕಠಿಣ ಸಮಯದಲ್ಲಿ ತನ್ನ ಸ್ನೇಹಿತಯರು ತನಗೆ ಬೆಂಬಲವಾಗಿ ನಿಂತಿದ್ದರು ಎಂದು ಮೌನಿ ಹೇಳಿದ್ದಾರೆ. ಆದರೆ, ಈ ಸ್ನೇಹವನ್ನು ಸೋಷಿಯಲ್ ಮೀಡಿಯಾದಲ್ಲಿ ತಪ್ಪು ಅರ್ಥದಲ್ಲಿ ಬಿಂಬಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ಭಾವನಾತ್ಮಕ ಬೆಂಬಲದ ಜತೆಗೆ ಆರ್ಥಿಕ ಸ್ವಾವಲಂಬನೆ ಮತ್ತು ಸ್ವಾತಂತ್ರ್ಯ ಎಷ್ಟು ಮುಖ್ಯ ಎಂಬುದನ್ನು ಮೌನಿ ಒತ್ತಿ ಹೇಳಿದ್ದಾರೆ.

ವದಂತಿಗಳು ಶುರುವಾಗಿದ್ದು ಹೇಗೆ?

ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ವಿಚ್ಛೇದನ ಘೋಷಿಸಿದ ಬೆನ್ನಲ್ಲೇ, ದಿಶಾ ಪಟಾನಿ, ಸೂರಜ್‌ನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದರು. ಅಲ್ಲದೆ, ದಿಶಾ ಮತ್ತು ಮೌನಿ ಒಂದೇ ರಜಾದಿನಗಳ ಪ್ರವಾಸದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರಿಂದ, ನೆಟ್ಟಿಗರು ಇವರಿಬ್ಬರು ಲೀಗಲ್ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎಂಬ ಎಡಿಟ್ ಮಾಡಿದ ನಕಲಿ ಪೋಸ್ಟ್‌ಗಳನ್ನು ವೈರಲ್ ಮಾಡಿದ್ದರು. ಈಗ ಮೌನಿ ಹೇಳಿಕೆಯಿಂದ ಆ ಎಲ್ಲಾ ಟ್ರೋಲ್‌ಗಳಿಗೆ ತೆರೆ ಬಿದ್ದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !