June 15, 2026
Monday, June 15, 2026
spot_img

IND vs PAK | ಸ್ಮೃತಿ ಬ್ಯಾಟಿಂಗ್‌, ದೀಪ್ತಿ ಸ್ಪಿನ್ನಿಂಗ್‌ಗೆ ಮಕಾಡೆ ಮಲಗಿದ ಪಾಕ್‌, ಟೀಂ ಇಂಡಿಯಾಗೆ ಸುಲಭ ಜಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬರ್ಮಿಂಗ್‌ಹ್ಯಾಮ್‌ನಲ್ಲಿ ನಿನ್ನೆ 2026 ರ ಮೊದಲ ಮಹಿಳಾ ಟಿ20 ವಿಶ್ವಕಪ್‌ ಪಂದ್ಯ ನಡೆದಿದ್ದು, ಭಾರತ 64 ರನ್‌ಗಳಿಂದ ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾಗೆ ಅಡ್ವಾಂಟೇಜಸ್‌ ಇತ್ತು. ಸ್ಮೃತಿ ಮಂಧಾನ ಸ್ಫೋಟಕ ಬ್ಯಾಟಿಂಗ್‌ನಿಂದ ತಂಡ 170 ರನ್ ಬಾರಿಸಿತು.

ಈ ಗುರಿಯನ್ನು ಬೆನ್ನಟ್ಟಿದ ಪಾಕ್‌ ತಂಡಕ್ಕೆ ದೀಪ್ತಿ ಶರ್ಮಾ ಸ್ಪಿನ್‌ ಮ್ಯಾಜಿಕ್‌ನಿಂದ 20 ಓವರ್​ಗಳನ್ನು ಮುಗಿಸಲು ಆಗಲೇ ಇಲ್ಲ. ಬರೀ 106 ರನ್‌ಗಳಿಗೆ ಇಡೀ ಟೀಂ ಪತನವಾಗಿದ್ದು, ಬರೋಬ್ಬರಿ 64 ರನ್​ಗಳ ಹೀನಾಯ ಸೋಲು ಕಂಡಿದೆ.

ಈ ಟಿ20 ವಿಶ್ವಕಪ್ ಪಂದ್ಯದಲ್ಲಿ, ಟೀಂ ಇಂಡಿಯಾ ಮೊದಲು ಬ್ಯಾಟ್ ಮಾಡಿ 170 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು. ತಂಡದ ಪರ ಮಂಧಾನ 68 ರನ್ ಗಳಿಸಿದರು, ಇದು ಪಾಕಿಸ್ತಾನ ವಿರುದ್ಧ ಅವರ ಅತ್ಯಧಿಕ ಸ್ಕೋರ್. ರಿಚಾ ಘೋಷ್ ಕೂಡ ಸ್ಫೋಟಕ 34 ರನ್​ಗಳ ಇನ್ನಿಂಗ್ಸ್ ಆಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !