June 17, 2026
Wednesday, June 17, 2026
spot_img

ಅಮೃತ ಮಹೋತ್ಸವದ ಸಂಭ್ರಮದಲ್ಲಿ ಅಂಕೋಲಾ ಕರ್ನಾಟಕ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಹೊಸದಿಗಂತ ವರದಿ ಅಂಕೋಲಾ :

ನಾಡಿನ ಪ್ರತಿಷ್ಠಿತ ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಒಂದಾದ, ತನ್ನ ಸಾರ್ಥಕ ಸೇವೆಯ ೭೪ ವರ್ಷಗಳನ್ನು ಪೂರೈಸಿ ಅಮೃತ ಮಹೋತ್ಸವ ವರ್ಷಕ್ಕೆ ಕಾಲಿರಿಸುತ್ತಿರುವ ಅಂಕೋಲೆಯ ಕರ್ನಾಟಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯಾಗಿದ್ದು ,ಗೌರವಾಧ್ಯಕ್ಷರಾಗಿ ಪ್ರೊ. ಕೆ.ವಿ. ನಾಯಕ, ಅಧ್ಯಕ್ಷರಾಗಿ ವಿಠ್ಠಲದಾಸ ಕಾಮತ, ಉಪಾಧ್ಯಕ್ಷರಾಗಿ ಶ್ರೀಧರ ನಾಯಕ, ಕಾರ್ಯದರ್ಶಿಯಾಗಿ ಮಹೇಶ ನಾಯಕ, ಸಹಕಾರ್ಯದರ್ಶಿಯಾಗಿ ಸುಕದ ನಾಯಕ, ಖಜಾಂಚಿಗಳಾಗಿ ಜಿ.ಬಿ. ನಾಯಕ ಆಯ್ಕೆಯಾಗಿದ್ದಾರೆ.

ಕರ್ನಾಟಕ ಸಂಘದ ಕನ್ನಡ ಭವನದಲ್ಲಿ ಪ್ರೊ. ಕೆ.ವಿ. ನಾಯಕ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ಜರುಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಗೌರವಾಧ್ಯಕ್ಷ ಪ್ರೊ. ಕೆ.ವಿ.ನಾಯಕ , ಕರ್ನಾಟಕ ಸಂಘವು ನಾಡಿನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು ಸಂಘದ ಅಮೃತಮಹೋತ್ಸವವನ್ನು ಅದ್ದೂರಿಯಾಗಿ ನಡೆಸಲು ಹೊಸ ಸಮಿತಿ ಸಕ್ರೀಯವಾಗಿ ಶ್ರಮಿಸಬೇಕು ಎಂದರು.

ಇದನ್ನೂ ಓದಿ:

ನೂತನ ಅಧ್ಯಕ್ಷ ವಿಠ್ಠಲದಾಸ ಕಾಮತ್ ಮಾತನಾಡಿ, ಅಮೃತಮಹೋತ್ಸವದ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನದ ಹೊಣೆ ವಹಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿ, ಎಲ್ಲರ ಸಹಕಾರದೊಂದಿಗೆ 75 ನೇ ವರ್ಷವನ್ನು ಸ್ಮರಣೀಯವಾಗಿಸೋಣ ಎಂದರು.

ಮಾಜಿ ಅಧ್ಯಕ್ಷ ಮಹಾಂತೇಶ ರೇವಡಿ ಕರ್ನಾಟಕ ಸಂಘದ ನೂತನ ಸಮಿತಿಗೆ ಶುಭಹಾರೈಸಿದರು. ಕಾರ್ಯದರ್ಶಿ ಬಾಲಚಂದ್ರ ನಾಯಕ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಮಹೇಶ ನಾಯಕ ವಂದಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !